ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್

ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ರಾಬರ್ಟ್ ಚಿತ್ರದ ಪೋಸ್ಟರ್ ಸೋಮವಾರ ಬೆಳಗ್ಗೆ ಬಿಡುಗಡೆಯಾಗಲಿದೆ.

ಹೌದು, ಈ ಸಂಬಂಧ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮೇ 25ರ 11 ಗಂಟೆ 5 ನಿಮಿಷಕ್ಕೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾ ಕ್ರಿಮಿಯಿಂದ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಈ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈ ನಡುವೆಯೇ ರಾಬರ್ಟ್ ಸಿನಿಮಾವನ್ನು ಆನ್‍ಲೈನ್ ಅಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಉಮಾಪತಿ ಸುಳ್ಳು ಎಂದು ಹೇಳಿದ್ದಾರೆ.

ದರ್ಶನ್ ಫ್ಯಾನ್ಸ್ ರಾಬರ್ಟ್ ಚಿತ್ರವನ್ನು ಕೈಬಿಡಲ್ಲ ಥೀಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಹೇಳಿ ಚಿತ್ರದ ನಿರ್ದೇಶಕ ಉಮಾಪತಿ ಅವರು ಅಮೆಜಾನ್ ಕಂಪನಿ ನೀಡಿದ ಭಾರೀ ಆಫರ್ ತಿರಸ್ಕರಿಸಿದ್ದಾರೆ.

ರಾಬರ್ಟ್ ಸಿನಿಮಾವನ್ನು ಆನ್‍ಲೈನ್‍ನಲ್ಲೇ ರಿಲೀಸ್ ಮಾಡಲು ಬೇಡಿಕೆ ಇಡಲಾಗಿತ್ತು. ಕೋಟಿ ಕೋಟಿ ಕೊಡುತ್ತೇವೆ ನಮಗೆ ರಾಬರ್ಟ್ ಕೊಡಿ ಎಂದು ಅಮೆಜಾನ್ ಫ್ರೈಮ್ ಅವರು ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಮಾತನಾಡಿದ್ದ ಚಿತ್ರದ ನಿರ್ಮಾಪಕ ಉಮಾಪತಿ ಅವರು, ಅಮೆಜಾನ್ ಚಾನೆಲ್‍ನಿಂದ ನಮ್ಮ ರಾಬರ್ಟ್ ಸಿನಿಮಾಕ್ಕೆ ಆಫರ್ ಬಂದಿದ್ದು ನಿಜ. 70 ಕೋಟಿಗೆ ಅವರು ಬೇಡಿಕೆ ಇಟ್ಟಿದ್ದೂ ಸತ್ಯ. ಆದರೆ ನಾವು ಒಪ್ಪಲಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ಓಟಿಟಿ ಫ್ಲಾಟ್‍ಫಾರ್ಮ್‍ಗಳಲ್ಲಿ ರಾಬರ್ಟ್ ರಿಲೀಸ್ ಮಾಡಲ್ಲ. ತಡವಾದರೂ ಪರವಾಗಿಲ್ಲ. ಥೀಯೇಟರ್ ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ರಾಜಾರೋಷವಾಗಿ ಹೇಳಿದ್ದಾರೆ.

ಕೊರೊನಾ ಮುಗಿದ ಮೇಲೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ. ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸಿನಿಮಾ ಕೈ ಬಿಡುವುದಿಲ್ಲ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದಕ್ಕೆ ಮುಗಿಬೀಳುತ್ತಾರೆ. ಅಂದಹಾಗೆ ಈಗಾಗಲೇ ನಮ್ಮ ಚಿತ್ರಕ್ಕೆ ಹಾಕಿದ ಬಂಡವಾಳ ಹಲವು ಮೂಲಗಳಿಂದ ವಾಪಸ್ ಬಂದಿದೆ. ಇನ್ನು ಮುಂದೆ ಬರುವುದೆಲ್ಲವೂ ಲಾಭವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರಿಲೀಸ್‍ಗೂ ಮೊದಲೇ ದಾಖಲೆ ಲೆಕ್ಕದಲ್ಲಿ ಲಾಭದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಸಿನಿಮಾ ರಿಲೀಸ್‍ಗೆ ರೆಡಿಯಾಗಿ ತಿಂಗಳುಗಳೇ ಕಳೆದಿವೆ. ಹಲವು ಬಾರಿ ರಿಲೀಸ್ ಡೇಟ್ ಕೂಡ ಹೊರಬಿದ್ದಿತ್ತು. ಅಷ್ಟರಲ್ಲಿ ಕೊರೊನಾದಿಂದ ಥೀಯೇಟರ್ ಗಳು ಬಂದ್ ಅದವು. ಇಂದು ಹಾಕಿದ ಬಂಡವಾಳಕ್ಕೆ ಹೆಚ್ಚು ಕಮ್ಮಿ ಡಬಲ್ ದುಡ್ಡು. ಜೊತೆಗೆ ಎಷ್ಟೆಷ್ಟು ಜನರು ನೋಡುತ್ತಾರೊ, ಅಷ್ಟಷ್ಟು ಹಣ ನಿರ್ಮಾಪಕರು ಮತ್ತು ಚಾನೆಲ್ ನಡುವೆ ಹಂಚಿಕೆಯಾಗುತ್ತದೆ.

Comments

Leave a Reply

Your email address will not be published. Required fields are marked *