ದಯವಿಟ್ಟು ಪರೀಕ್ಷೆ ಮುಂದೂಡಿ – ಅಳಲು ತೋಡಿಕೊಂಡ ಫಾರ್ಮಸಿ ವಿದ್ಯಾರ್ಥಿಗಳು

ಬೆಂಗಳೂರು: ನಿಗದಿ ಮಾಡಲಾಗಿರುವ ಪರೀಕ್ಷೆಗಳನ್ನು ಮುಂದೂಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಫಾರ್ಮಸಿ ಎರಡನೇ ವರ್ಷದ ಪರೀಕ್ಷೆ ಘೋಷಣೆ ಮಾಡಿದೆ. ಆದರೆ ವಿದ್ಯಾಥಿಗಳು ಮಾತ್ರ ನಮಗೆ ಆನ್ ಲೈನ್ ಕ್ಲಾಸ್ ಅರ್ಥವಾಗುತ್ತಿಲ್ಲ ಎಕ್ಸಾಂಗಳನ್ನು ಮುಂದೂಡಿ ಎಂದು ಹೇಳುತ್ತಿದ್ದಾರೆ.

ಕೋವಿಡ್ ಹರಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆದಿತ್ತು. ಈ ಆನ್‍ಲೈನ್ ತರಗತಿ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಫೇಲ್ ಆಗುವ ಸಾಧ್ಯತೆಯಿದೆ ಎಂದು ಹೇಳಿ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಮೆಡಿಕಲ್ ಕೋರ್ಸ್ ಪರೀಕ್ಷೆ ಮುಂದೂಡಿಕೆ ಆಗಿದೆ. ಹೀಗಿರುವಾಗ ನಮಗೆ ಮಾತ್ರ ಪರೀಕ್ಷೆ ಯಾಕೆ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ಆಫ್‍ಲೈನ್ ತರಗತಿ ಮಾಡಿದ ಬಳಿಕ ಪರೀಕ್ಷೆ ನಡೆಸಿ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಬರಬೇಕಾದರೆ ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕಾಗುತ್ತದೆ. ಕೋವಿಡ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಬಳಸಲು ಭಯವಾಗುತ್ತದೆ. ಹೀಗಾಗಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *