ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

ಮುಂಬೈ: ಇತ್ತೀಚೆಗೆ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದ ಬಾಲಿವುಡ್ ನಟ ಸೋನು ಸೂದ್, ಇದೀಗ ಅಜ್ಜಿಯೊಬ್ಬರ ಅಡ್ರೆಸ್ ಕೇಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಲಾಠಿ ಕೈಚಳಕದ ವಿಡಿಯೋ ವೈರಲ್ ಆಗಿದ್ದು, ಇದನ್ನು ನಟ ಸೋನು ಸೂದ್ ಸಹ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟದದ ಮಾಡಿ, ದಯವಿಟ್ಟು ನಾನು ಅಜ್ಜಿಯ ಬಗ್ಗೆ ಮಾಹಿತಿ ಪಡೆಯಬಹುದೆ, ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು ಕಲಿಸಿಕೊಡಲು ಇವರ ಅವಶ್ಯಕತೆ ಇದೆ. ಈ ಕುರಿತು ಸಣ್ಣ ತರಬೇತಿ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಇವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಕೇಳಿ, ಅಜ್ಜಿಯ ಸಾಹಸದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವರು ಈ ಕುರಿತು ಪೋಸ್ಟ್ ಮಾಡಿ ಅವರ ಅಡ್ರೆಸ್ ತಿಳಿಸಿದ್ದಾರೆ. ಈ ಅಜ್ಜಿ 85 ವರ್ಷದವರು, ಇವರ ಹೆಸರು ಶಾಂತಾ ಬಾಲು ಪವಾರ್. ಪುಣೆಯ ಹಡ್ಪಸರ್ ನವರು ಇಂತಹ ಸಂದರ್ಭದಲ್ಲಿಯೂ ಅವರೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸೋನು ಸೂದ್ ಕೊರೊನಾ ಮಹಾಮಾರಿ ಹಿಂಡಿ ಹಿಪ್ಪೆ ಮಾಡುತ್ತಿರುವ ಹೊತ್ತಲ್ಲಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ, ಪೊಲೀಸರಿಗೆ ಫೇಸ್ ಶೀಲ್ಡ್ ಸೇರಿದಂತೆ ನಿರ್ಗತಿಕರಿಗೆ ಆಹಾರ ಹಾಗೂ ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಹೀಗೆ ಸದಾ ಒಂದಿಲ್ಲೊಂದು ಸಹಾಯದಲ್ಲಿ ತೊಡಗಿರುವ ಸೋನು ಸೂದ್ ಇದೀಗ ಅಜ್ಜಿಯ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಅಜ್ಜಿ ಅಡ್ರೆಸ್ ಸಹ ಕೇಳಿದ್ದಾರೆ.

Comments

Leave a Reply

Your email address will not be published. Required fields are marked *