ದಯಮಾಡಿ ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿ: ಅನಿರುದ್ಧ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಡುತ್ತಿರುವ ನಟ ಅನಿರುದ್ಧ್ ಇದೀಗ ಮಂಗಳಮುಖಿಯರ ಪರ ದನಿ ಎತ್ತಿದ್ದಾರೆ.

ಈ ಸಂಬಂಧ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಸರ್ಕಾರ, ಸಂಸ್ಥೆ ಹಾಗೂ ಉದ್ಯಮಿಗಳಲ್ಲಿ ಕಳಕಳಿಯ ಮನವಿ. ದಯವಿಟ್ಟು ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಂಗಳಮುಖಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಟ ಅನಿರುದ್ಧ್ ಸರ್ಕಾರ ಮತ್ತು ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ನಟ ಕೇಳಿಕೊಂಡಿದ್ದಾರೆ.

ಈಗಾಗಲೇ ಅನಿರುದ್ಧ್ ಅವರು ಸ್ವಚ್ಛತೆ ಇಲ್ಲದ ಪ್ರದೇಶಗಳ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಬಿಬಿಎಂಪಿ ಗಮನಕ್ಕೆ ಂತರುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಆ ಪ್ರದೇಶಗಳನ್ನು ಶುಚಿಗೊಳಿಸುವಂತೆ ಮನವಿ ಮಾಡುತ್ತಾ ಬರುತ್ತಿದ್ದಾರೆ. ಜೊತೆಗೆ ಇದೀಗ ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ, ಅವಕಾಶ ವಂಚಿತ ಮಂಗಳಮುಖಿಯರಿಗೆ ಜೀವನ ಕಲ್ಪಿಸಿಕೊಡಲು ಮನವಿ ಮಾಡಿದ್ದಾರೆ.

ಸದ್ಯ ನಟನ ಈ ಮನವಿಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಗುತ್ತಿದೆ.

 

View this post on Instagram

 

A post shared by Aniruddha Jatkar (@aniruddhajatkar)

Comments

Leave a Reply

Your email address will not be published. Required fields are marked *