ದಂಡ ಹಾಕಿದ ಎಸ್‍ಐ ಜೊತೆ ಅಸಭ್ಯವಾಗಿ ಮಾತನಾಡಿದ ಯುವತಿಯರು

– ನಂದಿ ಬೆಟ್ಟಕ್ಕೆ ಬಂದ ಯುವತಿಯರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್

ಚಿಕ್ಕಬಳ್ಳಾಪುರ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಯುವತಿಯರು, ಪೊಲೀಸರ ಜೊತೆ ಅಸಭ್ಯ ಮಾತನಾಡಿರುವ ಘಟನೆ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ನಂದಿಗಿರಿಧಾಮಕ್ಕೆ ಬರುತ್ತಿದ್ದ ಯುವತಿಯರು ಹೆಲ್ಮೆಟ್ ಧರಿಸದೆ ಸ್ಕೂಟಿಯಲ್ಲಿ ಬಂದಿದ್ದರು. ಇದನ್ನು ಗಮನಿಸಿದ ಎಸ್‍ಐ ಸಂಚಾರಿ ನಿಮಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಯುವತಿಯರು ಎಎಸ್‍ಐ ಜೊತೆಗೆ ಅಸಭ್ಯ ಮಾತನಾಡಿದ್ದಾರೆ.

ಎರಡು ಸ್ಕೂಟಿಯಲ್ಲಿ, ನಾಲ್ವರು ಯುವತಿಯರು ನಂದಿಗಿರಿಧಾಮಕ್ಕೆ ಬಂದಿದ್ದರು. ಸಂಚಾರಿ ನಿಮಯದ ಉಲ್ಲಂಘನೆ ಅಡಿಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಯುವತಿಯರು ಎಸ್‍ಐ ಜೊತೆ ಅಸಭ್ಯ ಮಾತನಾಡಿದ್ದಾರೆ. ಕಾನೂನು ಪ್ರಕಾರ ದಂಡವಿಧಿಸಬೇಕು ಅಂದಿದ್ದಕ್ಕೆ, ದಂಡ ಹಾಕಬಾರದು ಎಂದು ಅಸಭ್ಯವಾದ ಮಾತುಗಳನ್ನು ಯುವತಿಯರು ಆಡಿದ್ದಾರೆ.

ಪ್ರಕೃತಿಯ ಅನನ್ಯ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ನಂದಿಗಿರಿಧಾಮಕ್ಕೆ ಈ ಸಮಯದಲ್ಲಿ ಪ್ರವಾಸಿಗರು ಬರುವುದು ಹೆಚ್ಚು. ಕರ್ನಾಟಕದ ಪಾಲಿನ ಊಟಿ ಎಂದೇ ಹೆಸರುವಾಸಿಯಾಗಿರುವ ನಂದಿ ಗಿರಿಧಾಮ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಬರುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಪ್ರವಾಸೋದ್ಯಮ ಇಲಾಖೆ ಕೈಗೊಂಡಿದೆ. ಆದರೆ ಕೆಲವರು ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ.

.

Comments

Leave a Reply

Your email address will not be published. Required fields are marked *