ತ್ವರಿತ ಕೊರೊನಾ ತಪಾಸಣೆಯ ಆ್ಯಂಟಿಜೆನ್‍ಗೆ ಜಗದೀಶ್ ಶೆಟ್ಟರ್ ಚಾಲನೆ

ಧಾರವಾಡ: ಕೋವಿಡ್ ತಪಾಣೆಗಾಗಿ ಧಾರವಾಡ ಜಿಲ್ಲೆಗೆ ಒಟ್ಟು 2,300 ಆ್ಯಂಟಿಜೆನ್ ಕಿಟ್ ಪೂರೈಕೆಯಾಗಿದೆ. ಈ ಆ್ಯಂಟಿಜೆನ್ ಪರೀಕ್ಷೆ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ಆ್ಯಂಟಿಜೆನ್ ಕಿಟ್ ಹೊಂದಿರುವ ವಾಹನ ಆಸ್ಪತ್ರೆ ಬಳಿ ಇರಲಿದೆ. ಅಲ್ಲಿಗೆ ಆಗಮಿಸುವ ಕೋವಿಡ್-19 ಲಕ್ಷಣ ಹೊಂದಿರುವ ಜನರಿಂದ ಸ್ಥಳದಲ್ಲಿಯೇ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರ್ಧ ಗಂಟೆಯಲ್ಲೇ ಸ್ಥಳದಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಎನ್ನುವ ವರದಿ ಲಭ್ಯವಾಗಲಿದೆ.

ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಕೇಸ್‍ಗಳು ಸಾವಿರದ ಗಡಿ ದಾಟಿ ಹೋಗಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ತಪಾಸಣೆಗೊಳಪಡಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿಯೂ ಆ್ಯಂಟಿಜೆನ್ ತಪಾಸಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ವೇಳೆ ಗುಣಲಕ್ಷಣ ಇಲ್ಲದೇ ಇರುವ ವ್ಯಕ್ತಿಗೆ ನೆಗೆಟಿವ್ ಬಂದರೆ ಮತ್ತೊಮ್ಮೆ ತಪಾಸಣೆ ಮಾಡಿಸಬೇಕಿಲ್ಲ. ಆದರೆ ಆ್ಯಂಟಿಜೆನ್ ಕಿಟ್ ತಪಾಸಣೆಯಲ್ಲಿ ನೆಗೆಟಿವ್ ಬಂದಿರುವ ವ್ಯಕ್ತಿಗೆ ರೋಗ ಲಕ್ಷಣಗಳಿದ್ದಲ್ಲಿ ಮಾತ್ರ ಮತ್ತೊಮ್ಮೆ ಸ್ವ್ಯಾಬ್ ಕೊಡಬೇಕಾಗುತ್ತದೆ.

Comments

Leave a Reply

Your email address will not be published. Required fields are marked *