ತಾಯಿ, ಮಗನ ಜೋಡಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮಸ್ಥರು

– ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ

ಚಂಡೀಗಢ: ತಾಯಿ ಮತ್ತು ಮಗನನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನ ಜಲಂಧರ್ ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮಂಗತ್ ರಾಮ್ ಎಂದು ಗುರುತಿಸಲಾಗಿದೆ. ಈತ ಮೇಕೆಗಳನ್ನು ಮೇಯಿಸಿ ಜೀವನವನ್ನು ನಡೆಸುತ್ತಿದ್ದನು. ಇವನ ಜೊತೆಗೆ ತಾಯಿ ಕೊಲೆಯಾಗಿದ್ದರೆ. ತಾಯಿ ಮಗನ ಜೋಡಿ ಕೊಲೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಮನೆಯಿಂದ ಸ್ವಲ್ಪ ದೂರದಲ್ಲಿ ಹೊಲದಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದ್ದು, ಈತನ ತಾಯಿ ಶವ ಮನೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಈ ಡಬಲ್ ಹತ್ಯೆಯಿಂದಾಗಿ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ. ಹತ್ಯೆಯಾದ ವೃದ್ಧೆ ಮಹಿಳೆಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಮತ್ತು ಆಕೆಯ ಮಗನಿಗೆ ನಡೆಯಲು ಆಗುತ್ತಿರಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ತಾಯಿ ಮತ್ತು ಮಗನ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಕೊಲೆಯ ಹಿಂದೆ ದರೋಡೆ ನಡೆಸಿರುವ ಸಾಧ್ಯತೆಯಿದೆ ಎಂದು ನೆರೆಹೊರೆಯವರು ಅನುಮಾನಿಸಿದ್ದಾರೆ.

ದರೋಡೆಕೋರರು ಹಣದ ಆಸೆಯಿಂದ ತಾಯಿ, ಮಗನನ್ನು ಕೊಂದಿದ್ದಾರೆ. ಈ ಜೋಡಿಕೊಲೆ ತನಿಖೆಯನ್ನು ಮಾಡುತ್ತೇವೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಕೊಲೆಯಾದ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ನಮಗೆ ದೊರಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *