ತಳ್ಳುವ ಗಾಡಿ ತಳ್ಳಲು ದಂಪತಿಗೆ ಸಹಾಯ ಮಾಡಿದ ಬೈಕರ್: ಸೆಹ್ವಾಗ್ ಶ್ಲಾಘನೆ

ನವದೆಹಲಿ: ಫೈ ಓವರ್ ಮೇಲೆ ಕಷ್ಟಪಟ್ಟು ತಳ್ಳುವ ಗಾಡಿ (ರಿಕ್ಷಾ) ತಳ್ಳುತ್ತಿದ್ದ ದಂಪತಿಗೆ ಬೈಕ್ ಸವಾರನೊಬ್ಬ ಒಬ್ಬ ಸಹಾಯ ಮಾಡಿದ ವೀಡಿಯೋವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಜಿಂದಾಬಾದ್ ಹೇಳುವ ಮೂಲಕ ಆತನ ಕಾರ್ಯಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಯೂಟ್ಯೂಬ್ ವೀಡಿಯೋದಿಂದ ಈ ಕ್ಲಿಪ್‍ನನ್ನು ಹೊರ ತೆಗೆಯಲಾಗಿದ್ದು, ತಳ್ಳುವ ಗಾಡಿ ಮೇಲೆ ಭಾರವಾದ ಲೋಡ್ ತುಂಬಿಕೊಂಡು ದಂಪತಿ ಹೋಗುತ್ತಿದ್ದರು. ಪತಿ ಗಾಡಿ ಪೆಡಲ್ ತುಳಿಯುತ್ತಿದ್ದರೆ ಪತ್ನಿ ಉರಿಬಿಸಿಲಿನಲ್ಲಿಯೂ ಗಾಡಿಯನ್ನು ತಳ್ಳುತ್ತಿದ್ದಳು. ಅದೇ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ಬೈಕರ್ ಒಬ್ಬ ಇದನ್ನು ನೋಡಿ ಮಹಿಳೆಯನ್ನು ತಳ್ಳುವ ಗಾಡಿಯಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿ ತನ್ನ ಕಾಲುಗಳ ಮೂಲಕ ರಿಕ್ಷಾವನ್ನು ಮುಖ್ಯ ರಸ್ತೆ ಬರುವವರೆಗೂ ತಳ್ಳುತ್ತಾನೆ.

ಈ ವೀಡಿಯೋದಲ್ಲಿನ ಬೈಕ್ ಸವಾರ ತನ್ನ ಯೂಟ್ಯೂಬ್ ಚಾನಲ್ ಎನ್‍ಸಿಆರ್ ಬೈಕರ್ಜ್‍ನಲ್ಲಿ ರಮ್ಮಿ ರೈಡರ್ ಎಂದು ಗುರುತಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಇನ್ಸಾನಿಯತ್ ಜಿಂದಾಬಾದ್ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್‍ನಲ್ಲಿ ಕ್ಲಿಪ್ ಹಂಚಿಕೊಂಡಿದ್ದಾರೆ. ಲೋಡ್ ಮಾಡಿದ ರಿಕ್ಷಾದ ಜೊತೆ ದಂಪತಿ ಮೇಲ್ಸೇತುವೆ ಮೇಲೆ ಹೋಗುತ್ತಿದ್ದರು. ಗಂಡ ರಿಕ್ಷಾವನ್ನು ಎಳೆಯುತ್ತಿದ್ದರೆ, ಪತ್ನಿ ರಿಕ್ಷಾವನ್ನು ತಳ್ಳುತ್ತಿದ್ದಳು. ಇದನ್ನು ನೋಡಿ ಬೈಕರ್ ಮಹಿಳೆಯನ್ನು ರಿಕ್ಷಾದಲ್ಲಿ ಕುಳಿತುಕೊಳ್ಳಲು ವಿನಂತಿಸಿದ್ದಾನೆ ಬಳಿಕ ರಿಕ್ಷಾವನ್ನು ತನ್ನ ಕಾಲುಗಳ ಮುಖಾಂತರ ತನ್ನ ಬೈಕ್‍ನೊಂದಿಗೆ ತಳ್ಳಿದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋವನ್ನು ಒಂದು ದಿನದ ಹಿಂದೆ ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ ಶೇರ್ ಮಾಡಿದ್ದು, ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಗೂ ಬೈಕರ್ ರಿಕ್ಷಾ ತಳ್ಳಲು ಸಹಾಯ ಮಾಡಿದ್ದಕ್ಕಾಗಿ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಜೊತೆಗೆ ಕಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

Comments

Leave a Reply

Your email address will not be published. Required fields are marked *