ತುರ್ತು ಅಲ್ಲದ, ಪಾರದರ್ಶಕ ಇಲ್ಲದ ಎಲ್ಲಾ ಯೋಜನೆ ರದ್ದು- ಕುಂಭಾಸಿ ದೇಗುಲದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಶಪಥ

ಉಡುಪಿ: ಪಾರದರ್ಶಕತೆ ಇಲ್ಲದ, ತುರ್ತು ಅವಶ್ಯಕತೆ ಎಂದು ಅನ್ನಿಸದ ನನ್ನ ಇಲಾಖೆಯ ಎಲ್ಲಾ ಯೋಜನೆಗಳನ್ನು ರದ್ದು ಮಾಡಲಾಗುವುದು ಎಂದು ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಇಲಾಖೆ ಸಚಿಚ ಕೋಟ ಶ್ರೀನಿವಾಸ ಪೂಜಾರಿ ಕುಂಭಾಸಿ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಶಪಥ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕುಂಭಾಸಿಯಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಪ್ರಯತ್ನಿಸುವೆ. ತಲೆಗೊಂದು ಸೂರು ಕುಡಿಯಲು ನೀರು ಒದಗಿಸಲು ಪ್ರಯತ್ನಿಸುವೆ ಎಂದು ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನನ್ನ ಇಲಾಖೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಪರಿಶಿಷ್ಟ ಜಾತಿಯವರಿಗೆ ಮನೆ ಕಟ್ಟಲು ಈವರೆಗೆ 1.75 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಮೊತ್ತ 5 ಲಕ್ಷಕ್ಕೇರಿಸಲು ಹಣಕಾಸು ಇಲಾಖೆಗೆ ಶಿಫಾರಸು ಮಾಡಿದ್ದೇನೆ. ಪರಿಶಿಷ್ಟ ಜಾತಿಯವರ ವಾಸದ ಭೂಮಿಗೆ ಹಕ್ಕುಪತ್ರ ನೀಡಲು ಹೊಸ ಕಾರ್ಯಕ್ರಮ ಹಾಕಿದ್ದೇವೆ. ಇರುವ ನೆಲ ಖಾಸಗಿ ಅಥವಾ ಸರ್ಕಾರಿಯಾಗಿದ್ದರೆ ಹಕ್ಕುಪತ್ರ ನೀಡಲು ನಿರ್ದೇಶನ ನೀಡುತ್ತೇನೆ. ಮನೆಗೆ ವಿದ್ಯುತ್ ನೀರು ಶೌಚಾಲಯ ಒದಗಿಸಲು ಕಾರ್ಯಕ್ರಮ ರೂಪಿಸಲಿದ್ದು, ತುರ್ತು ಅಲ್ಲದ- ಪಾರದರ್ಶಕತೆ ಇಲ್ಲದ ಅನಪೇಕ್ಷಿತ ಯೋಜನೆ ರದ್ದು ಮಾಡುತ್ತೇವೆ ಎಂದು ಸಚಿವ ಕೋಟ ಹೇಳಿದರು. ಇದನ್ನೂ ಓದಿ: ಸಾಲ ಮಾಡಿಯೂ ಮನೆ ಕಟ್ಟಬಾರದಾ?- ಶಾಂತಾ ಶ್ರೀನಿವಾಸ ಪೂಜಾರಿ ಕಣ್ಣೀರು

ಬಡವರ ಮಕ್ಕಳು ವಿದೇಶದಲ್ಲಿ ವಿದ್ಯೆ ಪಡೆಯಲಿ
ಬಡವರ ಜೀವನಕ್ಕೆ ಬೇಕಾದ ಅವಶ್ಯಕತೆಗಳಿಗೆ ತುರ್ತು ಸ್ಪಂದನೆ ನೀಡುತ್ತೇವೆ. ಬಡವರ ಮಕ್ಕಳಿಗೆ ವಿದೇಶ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸುತ್ತೇವೆ. ಉನ್ನತ ಶಿಕ್ಷಣ , ಮೆಡಿಕಲ್ ಕಲಿಯಲು ಆರ್ಥಿಕ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಕುರಿತು ಚರ್ಚಸಿಲು ಸೋಮವಾರ ವಿಶೇಷ ಸಭೆ ನಡೆಸುವುದಾಗಿ ಎಂದು ಪೂಜಾರಿ ಹೇಳಿದರು. ಇದನ್ನೂ ಓದಿ: ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ

Comments

Leave a Reply

Your email address will not be published. Required fields are marked *