ತರಕಾರಿ ಬುಟ್ಟಿ ಒದ್ದಿದ್ದ ಪೊಲೀಸಪ್ಪ ಸಸ್ಪೆಂಡ್

ಚಂಡೀಗಢ: ವ್ಯಾಪಾರಿಯ ತರಕಾರಿಯ ಬುಟ್ಟಿಯನ್ನ ಒದ್ದು ಅಮಾನವೀಯವಾಗಿ ನಡೆದುಕೊಂಡಿದ್ದ ಪೊಲೀಸ್ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ಪಂಜಾಬ್ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಿಗದಿತ ಸಮಯದಲ್ಲಿಯೇ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಪಂಜಾಬ್ ರಾಜ್ಯದ ಫಗವಾಡಾ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಕಂವರ್ ದೀಪ್ ಕೌರ್ ತರಕಾರಿ ವ್ಯಾಪಾರಿಗಳ ಜೊತೆ ಅಮಾನವೀಯವಾಗಿ ನಡೆದುಕೊ0ಡಿದ್ದ ವೀಡಿಯೋ ವೈರಲ್ ಆಗಿತ್ತು.

ಏನದು ವೀಡಿಯೋ?: ಮಾರುಕಟ್ಟೆಗೆ ಬರೋ ಪೊಲೀಸ್ ಅಧಿಕಾರಿ ತರಕಾರಿ ಅಂಗಡಿ ಮುಚ್ಚುವಂತೆ ಹೇಳುತ್ತಿರುತ್ತಾರೆ. ವ್ಯಾಪಾರಿಗಳು ಸಹ ಅವಸರವಾಗಿ ತರಕಾರಿ ಅಂಗಡಿ ಒಳಗೆ ತೆಗೆದುಕೊಳ್ಳುತ್ತಿರುತ್ತಾರೆ. ಈ ವೇಳೆ ಕಂವರ್ ದೀಪ್ ಅಂಗಡಿ ಮುಂದೆ ಮೆಣಸಿನಕಾಯಿ ತುಂಬಿಸಿದ್ದ ಪಾತ್ರೆಯನ್ನ ಕಾಲಿನಿಂದ ಒದ್ದು ಹೋಗುತ್ತಾರೆ.

ವೀಡಿಯೋ ವೈರಲ್ ಬಳಿಕ ಪಂಜಾಬ್ ಡಿಜಿಪಿ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವ್ಯಾಪಾರಿಯನ್ನ ಠಾಣೆ ಕರೆಸಿ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ವ್ಯಾಪಾರಿಗಾದ ನಷ್ಟವನ್ನ ಪೊಲೀಸ್ ಅಧಿಕಾರಿಯ ಸಂಬಳದಿಂದ ಕಡಿತಗೊಳಿಸುವಂತೆ ಆದೇಶಿಸಲಾಗಿದೆ.

ಇಂತಹ ಘಟನೆಗಳನ್ನ ಪಂಜಾಬ್ ಪೊಲೀಸರು ಪ್ರೋತ್ಸಾಹ ನೀಡಲ್ಲ. ಜನ ಸಾಮಾನ್ಯರಿಗೆ ಕೊರೊನಾ ನಿಯಮಗಳನ್ನ ತಿಳಿ ಹೇಳಿ. ಆದ್ರೆ ಅಮಾನವೀಯವಾಗಿ ನಡೆದುಕೊಳ್ಳೋದು ತಪ್ಪು ಎಂದು ಡಿಜಿಪಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *