ತನ್ನ ಹೆಸರಿನಲ್ಲಿ ಎಂಬಿಬಿಎಸ್ ಪರೀಕ್ಷೆ ಬರೆಸಿದವ ಪೊಲೀಸರ ಬಲೆಗೆ

ನವದೆಹಲಿ: ತನ್ನ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯಿಂದ ಎಂಬಿಬಿಎಸ್ ಪರೀಕ್ಷೆ ಬರೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮನೋಹರ್ ಸಿಂಗ್(35) ಎಂದು ಗುರುತಿಸಲಾಗಿದ್ದು ಈತ ರಾಜಸ್ತಾನದ ಪಾಲಿ ಜಿಲ್ಲೆಯ ನಿವಾಸಿ. ಈತ ತನ್ನ ಬದಲಾಗಿ ಬೇರೆಯವರನ್ನು ಪರೀಕ್ಷೆಗೆ ಕೂರಿಸಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.

ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ (ಎಫ್‍ಎಂಜಿಇ) ಸ್ಕ್ರೀನಿಂಗ್ ಪರೀಕ್ಷೆಯನ್ನು ಡಿಸೆಂಬರ್ 4, 2020 ರಂದು ನಡೆಸಲಾಯಿತು. ಮನೋಹರ್ ಸಿಂಗ್‍ಗೆ ಮಥುರಾ ರಸ್ತೆಯಲ್ಲಿ ಪರೀಕ್ಷಾ ಕೇಂದ್ರವನ್ನು ನೀಡಲಾಗಿತ್ತು. ಅರ್ಜಿ ನಮೂನೆಯಲ್ಲಿರುವ ಫೋಟೋ ಮತ್ತು ಪರೀಕ್ಷೆಯ ದಿನದಂದು ತೆಗೆದ ಫೋಟೋಗಳ ನಡುವೆ ಹೊಂದಿಕೆಯಾಗದ ಕಾರಣ ಆರೋಪಿಯ ಫಲಿತಾಂಶವನ್ನು ಸ್ಥಗಿತಗೊಳಿಸಲಾಗಿತ್ತು. ಫೆಬ್ರವರಿ 3 ರಂದು ಫೇಸ್ ಐಡಿ ಪರಿಶೀಲನೆ ಮಾಡಿದಾಗ ಅದು ಕೂಡ ಹೊಂದಿಕೆಯಾಗಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಆರ್ ಪಿ ಮೀನಾ ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಮನೋಹರ್ ಸಿಂಗ್, ತಾನು ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದೇನೆ. ಕಳೆದ ಆರು ವರ್ಷಗಳಿಂದ ಎಫ್‍ಎಂಜಿಇ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದೇನು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಮನೋಹರ್ ಸಿಂಗ್‍ನನ್ನು ಬಂಧಿಸಲಾಗಿದೆ. ಪ್ರವೇಶ ಪತ್ರ, ಎಂಬಿಬಿಎಸ್ ಡಿಗ್ರಿ ಮತ್ತು ಅರ್ಜಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *