ತಂಬಿಟ್ಟು, ಬೆಂಡು, ಬತ್ತಾಸಿನ ಮೇಲೆ ಶುಭಾ ಮನಸ್ಸು – ಮಂಜುಗೆ ಉಂಡೆ ಕೋಳಿ ಆಸೆ

ಬಿಗ್‍ಬಾಸ್ ದಿವ್ಯಾ ಉರುಡುಗ ಹಾಗೂ ಮಂಜುಗೆ ನ್ಯಾಕ್(ಕೌಶಲ್ಯವನ್ನು ಬಳಸಿಕೊಂಡು ಸಮತೋಲನವನ್ನು ಕಾಪಾಡಿಕೊಂಡು ಆಡುವಂತ ಆಟ)ವನ್ನು ನೀಡಿದ್ದರು. ಇದರಲ್ಲಿ ಗೆದ್ದವರಿಗೆ ವೈಯಕ್ತಿಕ ಲಕ್ಷುರಿ ನೀಡುವುದಾಗಿ ತಿಳಿಸಿದ್ದರು.

ಅದರಂತೆ ಈ ಟಾಸ್ಕ್‌ನಲ್ಲಿ ಮಂಜು ಗೆಲ್ಲುತ್ತಾರೆ. ಬಳಿಕ ಶುಭಾ ಮಂಜುಗೆ ಲಕ್ಷುರಿಯಾಗಿ ಏನು ಕೇಳುವುದು ಎಂದು ತಲೆ ಕೆಡಿಸಿಕೊಂಡು ಮನೆಯೆಲ್ಲಾ ಸುತ್ತಾಡುತ್ತಾ ಕಡಲೆ ಪಪ್ಪು ಕೇಳೋಣ್ವಾ ಅಥವಾ ಹಾಲ್ಕೋವಾ ಕೇಳೋಣ್ವಾ? ಅಂತ ಚರ್ಚೆ ನಡೆಸಿದ್ದಾರೆ. ಆಗ ಮಂಜು ನೀವೆಲ್ಲಾ ಏನೇ ಹೆಳಿದರೂ ನಾನು ಮಾತ್ರ ಚಿಕನ್‍ನನ್ನೇ ಕೇಳುವುದು ಎಂದು ಪಟ್ಟು ಹಿಡಿಯುತ್ತಾರೆ.

ಆಗ ಶುಭಾ ಬೇಡ ಮಂಜು, ನನಗೆ ನೀನು ಏನು ತಿನ್ನಬೇಕು ಅಂತ ಇಷ್ಟ ಆಗುತ್ತಿದ್ಯೋ ಅದನ್ನ ಕೇಳೋಣ ಎನ್ನುತ್ತಾ ಕೊನೆಗೆ ಮಂಜುಗೆ ಲಕ್ಷುರಿ ಕುಪನ್‍ನಲ್ಲಿ ಬೆಂಡು ಬತ್ತಾಸು, ತಂಬಿಟ್ಟು ಬೇಕಂತೆ ಕಳುಹಿಸಿಕೊಡಿ ಬಿಗ್‍ಬಾಸ್, ಅವರಿಗೆ ಕ್ಯಾಮೆರಾ ಮುಂದೆ ಬಂದು ಹೇಳಲು ಬೇಜಾರಾಗುತ್ತಿದ್ಯಂತೆ ಹಾಗಾಗಿ ನನ್ನ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದಿದ್ದಾರೆ.

ಇದರ ಮಧ್ಯೆ ಮಂಜು ನಾನು ತಿನ್ನುವುದು ನೀನಲ್ಲ. ಬಾ ಇಲ್ಲಿ, ನೀನು ಆ ಕಡೆ ಹೋಗು ಕ್ಯಾಮೆರಾಯಿಂದ ಪಕ್ಕಕ್ಕೆ ಶುಭಾರನ್ನು ತಳ್ಳುತ್ತಾರೆ. ಆದರೂ ಶುಭಾ ಮಂಜುಗೆ ಕ್ಯಾಮೆರಾ ಮುಂದೆ ಚಿಕನ್ ಕೇಳಲು ಬಿಡದೇ ಆಟ ಆಡಿಸಿದ್ದಾರೆ. ಕೊನೆಗೆ ಶುಭಾ ಬಾಯಿ ಮುಚ್ಚಿ ಮಂಜು ಬಿಗ್‍ಬಾಸ್ ನನಗೆ ಗ್ರೀಲ್ ಆಗಿರುವ ಫುಲ್ ಉಂಡೆ ಕೋಳಿ ಅಂದರೆ ತಂದೂರಿ ಚಿಕನ್ ಬೇಕು ಎಂದು ಕೇಳಿದ್ದಾರೆ.

ಅದರಂತೆ ಬಿಗ್‍ಬಾಸ್ ಒಂದು ಪ್ಲೇಟ್‍ನಲ್ಲಿ ತಂದೂರಿ ಚಿಕನ್ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಮಂಜು ಪ್ಲೇಟ್‍ನಲ್ಲಿ ಹಿಡಿದು ಮನೆಯ ಎಲ್ಲ ಸ್ಪರ್ಧಿಗಳಿಗೂ ತೋರಿಸುತ್ತಾ ಹೊಟ್ಟೆ ಉರಿಸಿ, ಕೊನೆಗೆ ಒಂದು ಫುಲ್ ಉಂಡೇ ಕೋಳಿ ಸವಿದಿದ್ದಾರೆ. ಇದನ್ನು ಕಂಡು ದಿವ್ಯಾ ಉರುಡುಗ ಕೂಡ ಆಸೆ ಪಟ್ಟು ಬಿಗ್‍ಬಾಸ್ ನನಗೂ ಒಂದು ತಂದೂರಿ ಚಿಕನ್‍ನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

Comments

Leave a Reply

Your email address will not be published. Required fields are marked *