ತಂದೆ ಸಿಎಂ ಆಗಿರೋದು ನಮ್ಮೆಲ್ಲರ ಅದೃಷ್ಟ – ಬಿಎಸ್‍ವೈ ಪುತ್ರಿ

– ಆ ಅದೃಷ್ಟ ಕೈ ಕೊಟ್ರೆ ಏನು ಮಾಡೋಕೆ ಆಗಲ್ಲ

ಧಾರವಾಡ: ಬಿಎಸ್‍ವೈ ಸಿಎಂ ಆಗಿರುವುದು ನಮ್ಮೆಲ್ಲರ ಸೌಭಾಗ್ಯ. ಅವರು ಸಿಎಂ ಆಗಿರುವುದು ನಮ್ಮೆಲ್ಲರ ಅದೃಷ್ಟ. ಒಂದು ವೇಳೆ ಆ ಅದೃಷ್ಟ ನಮ್ಮಿಂದ ಕೈ ಕೊಟ್ಟರೇ ಏನೂ ಮಾಡೋಕೆ ಆಗೋದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರಿ ಅರುಣಾದೇವಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅರುಣಾದೇವಿ, ನಮ್ಮ ತಂದೆ ಸಿಎಂ ಆಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ನಮ್ಮ ತಂದೆ ಎನ್ನುವ ಅಭಿಮಾನ ಮಾತ್ರವಲ್ಲ ಸಾಮಾನ್ಯ ಮಹಿಳೆಯಾಗಿ ಈ ಮಾತು ಹೇಳಿತ್ತಿರುವೆ. ಅವರು ಅವಧಿ ಪೂರ್ಣ ಮಾಡುವದಿಲ್ಲ ಎನ್ನುವುದೆಲ್ಲ ವದಂತಿ ಅಷ್ಟೆ. ಅವರು ಕೌನ್ಸಿಲರ್, ಎಂಎಲ್‍ಎ ಇದ್ದಾಗಿನಿಂದಲೂ ಇಂತಹುದೆಲ್ಲ ಎದುರಿಸಿಕೊಂಡು ಬಂದಿದ್ದಾರೆ ಎಂದರು.

ಈಗ ಸಿಎಂ ಆಗಿದ್ದಾಗ ಯಾರೋ ಹೇಳಿದ್ದಾರಂತ ಅಳಕು ಪಡೋದಿಲ್ಲ. ತಂದೆಯವರು ನೆಮ್ಮದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಕೋವಿಡ್ ಮತ್ತು ಪ್ರವಾಹ ಬಂದಾಗ ಸಮರ್ಥವಾಗಿ ಎದುರಿಸಿದ್ದಾರೆ. ಸಾಮಾನ್ಯ ಜನ ಪಕ್ಷಾತೀತವಾಗಿ ಯಡಿಯೂರಪ್ಪನವರನ್ನು ಬಹಳ ಪ್ರೀತಿಯಿಂದ ಕಾಣ್ತಾರೆ. ಪಕ್ಷದ ಆತಂರಿಕ ವಿಷಯಗಳ ಬಗ್ಗೆ ನನಗೆ ಜ್ಞಾನವಿಲ್ಲ. ಆದರೆ ಯಡಿಯೂರಪ್ಪ ಮೇರು ಪರ್ವತ. ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮತನಾಡಿ, ಆ ಆರೋಪಗಳಿಗೆ ತಂದೆ ಮತ್ತು ವಿಜಯೇಂದ್ರ ಬೇಕಾದ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *