ತಂದೆಯ ಸಾಧನೆಯನ್ನು ಹಾಡಿಹೊಗಳಿದ ಸುದೀಪ್ ಪುತ್ರಿ

ಬೆಂಗಳೂರು: ಸಿನಿರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಕುರಿತಾಗಿ ಸಿನಿಮಾರಂಗ ಆಪ್ತರು ಹಾಡಿಹೊಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಿಚ್ಚನ ಸಾಧನೆ ಕುರಿತಾಗಿ ಬರೆದುಕೊಂಡಿದ್ದಾರೆ. ಅಂತೆಯೇ ಇದೀಗ ಸುದೀಪ್ ಅವರ ಮಗಳು ಸಾನ್ವಿ ಅಪ್ಪನ ಸಾಧನೆ ಕುರಿತಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

ಈ ಸಾಧನೆ ಮಾಡಲು ನೀನು ತುಂಬಾ ಶ್ರಮಿಸಿದ್ದೀಯಾ ಅಪ್ಪ. ಅದರಿಂದಾಗಿಯೇ ಈಗ ನೀನು ಮಿನುಗುವ ನಕ್ಷತ್ರದಂತೆ ಹೊಳೆಯುತ್ತಿದ್ದೀಯಾ. ನಿಮ್ಮ ಸಾಧನೆ ಬಗ್ಗೆ ನನಗಿಂತಲೂ ಹೆಮ್ಮೆ ಪಡುವವರು ಬೇರೆ ಯಾರೂ ಇಲ್ಲ. ನೀನು ಊಹಿಸುವುದಕ್ಕಿಂತೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಪ್ರೀತಿಯ ಅಪ್ಪನ ಈ ಸಾಧನೆ ಬಗ್ಗೆ ಮಗಳು ಸಾನ್ವಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ಸಿನಿರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಬೆಳ್ಳಿ ಹಬ್ಬವನ್ನು ದುಬೈನಲ್ಲಿ ಅದ್ಧೂರಿಯಾಗಿ ಆಚರಿಸಿದ್ದು, ಇದರಲ್ಲಿ ಕಳೆದ ಭಾನುವಾರ ಬೆಳ್ಳಿ ಹಬ್ಬದ ಪಾರ್ಟಿ ಜೋರಾಗಿ ನಡೆದಿದ್ದು, ಸಿನಿರಂಗದಲ್ಲಿ 25 ವರ್ಷ ಕಳೆದಿದ್ದು ಅದನ್ನು ಸಂಭ್ರಮಿಸಲು ಕಿಚ್ಚ ಸುದೀಪ್ ಅವರ ಅಭಿಮಾನಿಗಳು, ವಿಕ್ರಾಂತ್ ರೋಣ ಚಿತ್ರತಂಡ ಹಾಗೂ ಕಿಚ್ಚನ ಕುಟುಂಬ ಸಹ ಭಾಗಿಯಾಗಿತ್ತು. ಇದೇ ವೇಳೆ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲೋಗೊ ಹಾಗೂ ಕಿಚ್ಚನ ಸಿನಿ ಜರ್ನಿಯ ಪುಟ್ಟ ವೀಡಿಯೋವನ್ನು ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಯಿತು.

 

 

View this post on Instagram

 

A post shared by Sanvi sudeep (@sanvisudeepofficial)

ಅಪ್ಪನ ಸಾಧನೆ ಬಗ್ಗೆ ಸಾನ್ವಿ ಭಾವುಕರಾಗಿ ಪ್ರೀತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಮುದ್ದು ಮುದ್ದಾಗಿ ಬರೆದುಕೊಂಡಿದ್ದಾರೆ. ಸಾನ್ವಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಸಾಲುಗಳು ಅಪ್ಪನ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ನೆಟ್ಟಿಗರು ಮತ್ತು ಕಿಚ್ಚ ಅಭಿಮಾನಿಗಳು ಅಪ್ಪ -ಮಗಳ ಪ್ರೀತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *