ತಂದೆ ತಲೆ ಕೂದಲು, ಗಡ್ಡ ಬೋಳಿಸಿಕೊಂಡಿರುವುದ್ದನ್ನು ನೋಡಿ ಗುರುತು ಸಿಗದೇ ಅವಳಿ ಜವಳಿ ಹೆಣ್ಣು ಮಕ್ಕಳು ಹೆದರಿ ಅತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಿಕ್‍ಟಾಕ್ ಬಳಕೆದಾರರಾದ ಜೊನಾಥನ್ ನಾರ್ಮೊಯ್ಲ್ ಎಂಬ ವ್ಯಕ್ತಿ ತಲೆ ಕೂದಲು ಮತ್ತು ಗಡ್ಡ ತೆಗೆದ ತಂದೆಯ ಹೊಸ ಲುಕ್ ನೋಡಿದ ಇಬ್ಬರು ಹೆಣ್ಣು ಮಕ್ಕಳು ಅವರನ್ನು ಅಪರಿಚಿತರೆಂದು ಭಾವಿಸಿಕೊಂಡು ಗಳಗಳನೇ ಅತ್ತಿದ್ದಾರೆ.

ವೈರಲ್ ಆಗಿರುವ ವೀಡಿಯೋನಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾರೆ. ಈ ವೇಳೆ ತಂದೆಯನ್ನ ಮಕ್ಕಳು ದಿಟ್ಟಿಸಿ ನೋಡುತ್ತಿರುವ ವೇಳೆ ಜೊನಾಥನ್ ನಾರ್ಮೊಯ್ಲ್ ಮಾತಾನಾಡಿಸಲು ಮುಂದಾಗುತ್ತಾರೆ. ಹಾಯ್, ಇಬ್ಬರು ಏನು ಮಾಡುತ್ತಿದ್ದೀರಾ? ಎಂದು ಕೇಳುತ್ತಾರೆ ಇದರಿಂದ ಭಯಭೀತರಾದ ಮಕ್ಕಳಿಬ್ಬರು ಒಬ್ಬರ ನಂತರ ಒಬ್ಬರು ಅಳಲು ಪ್ರಾರಂಭಿಸುತ್ತಾರೆ.
https://twitter.com/Aqualady6666/status/1367372395762229248
ಬಳಿಕ ತಂದೆ ಮಗುವೊಂದಕ್ಕೆ ಎತ್ತಿಕೊಳ್ಳುವುದಾಗಿ ಕೈಚಾಚುತ್ತಾರೆ. ಈ ವೇಳೆ ಮತ್ತೊಂದು ಮಗು ತನ್ನ ಸಹೋದರಿಗೆ ಹೋಗದಂತೆ ಕೈ ಅಡ್ಡವಿಟ್ಟು ರಕ್ಷಣೆ ಮಾಡುತ್ತದೆ. ಸದ್ಯ 37 ಸೆಕೆಂಡ್ ಇರುವ ಈ ಮುದ್ದು ಮುಖದ ಮಕ್ಕಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, 45 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ ಹಾಗೂ 1.8 ಲಕ್ಷ ಲೈಕ್ಸ್ ಮತ್ತು 44,000 ಕಮೆಂಟ್ಸ್ ಪಡೆದುಕೊಂಡಿದೆ.

Leave a Reply