ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನ ಬರ್ಬರ ಕೊಲೆ

ಕಲಬುರಗಿ: ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆಂದು ಹೋಗಿದ್ದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಕೋಟನೂರ ತರಕಾರಿ ಮಾರ್ಕೆಟ್‍ನಲ್ಲಿ ನಡೆದಿದೆ.

ನಿಖಿಲ್(24) ಕೊಲೆಯಾದ ದುರ್ದೈವಿ. ತಂಗಿಯ ಎಂಗೇಜ್‍ಮೆಂಟ್ ಕಾರ್ಯಕ್ರಮ ನಾಳೆ ನಡೆಯಲಿದ್ದ ಕಾರಣ ತಾಯಿ ಮತ್ತು ಅಣ್ಣನೊಂದಿಗೆ ಕೋಟನೂರ ಬಳಿಯ ಮಾರ್ಕೆಟ್‍ಗೆ ತರಕಾರಿ ಖರೀದಿಗೆ ನಿಖಿಲ್ ತೆರಳಿದ್ದರು. ಈ ವೇಳೆ ಈ ಹಿಂದೆ ತಂಗಿಯನ್ನು ಪ್ರೀತಿಸುತ್ತಿದ್ದ ಯುವಕ ವಿಶಾಲ್ ಹಾಗೂ ಆತನ ಸ್ನೇಹಿತರ ತಂಡ ನಿಖಿಲ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ:ಪ್ರೇಮ ವೈಫಲ್ಯ ಅತಿಥಿ ಉಪನ್ಯಾಸಕ ಆತ್ಮಹತ್ಯೆ

ನಿಖಿಲ್‍ನ ತಂಗಿಯ ಎಂಗೇಜ್‍ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ ನಿಶ್ಚಯವಾಗಿತ್ತು. ಈ ದ್ವೇಷದಿಂದ ಕಾರಿನಲ್ಲಿ ಬಂದ ವಿಶಾಲ್ ಮತ್ತು ತಂಡ ಮಾರ್ಕೆಟ್‍ನಲ್ಲಿ ನಿಖಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಪರಿಣಾಮ ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ತಾಯಿ ಮತ್ತು ಅಣ್ಣನಿಗೆ ಗಂಭೀರ ಗಾಯವಾಗಿದೆ. ಗಾಯಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *