ಡ್ಯಾನ್ಸರ್ಸ್ ನೆರವಿಗೆ ನಿಂತ ಬಾಲಿವುಡ್ ನಟ ಅಕ್ಷಯ್ ಕುಮಾರ್

ಮುಂಬೈ: ಕೊರೊನಾ ಸಂಕಷ್ಟದಲ್ಲಿ ಕೆಲಸ ಇಲ್ಲದೆ ಕಷ್ಟದಲ್ಲಿ ಇರುವ 3,600 ಡ್ಯಾನ್ಸರ್ಸ್ ನೆರವಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಉಚಿತವಾಗಿ ದಿನಸಿ ನೀಡಲು ನಿರ್ಧಾರ ಮಾಡಿದ್ದಾರೆ.

ಕೊರೊನಾವೈರಸ್ 2 ನೇ ಅಲೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಅಗತ್ಯ ಇರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದೇ ಸಾಲಿಗೆ ನಟ ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ. ಈ ಹಿಂದೆ ಆಕ್ಸಿಜನ್ ಕಾನ್ಸನ್‍ಟ್ರೇಟರ್ ದಾನ ಮಾಡಿ ಗೌತಮ್ ಗಂಭೀರ ಪ್ರತಿಷ್ಠಾನಕ್ಕೆ 1 ಕೋಟಿ ಕೊಡುಗೆ ನೀಡಿದ್ದರು. ಇದೀಗ 3,600 ಡ್ಯಾನ್ಸರ್ಸ್‍ಗೆ ಉಚಿತವಾಗಿ ದಿನಸಿಯನ್ನು ನೀಡಲು ಮುಂದಾಗಿದ್ದಾರೆ.

ಅಕ್ಷಯ್ ಅವರು 50 ನೇ ವರ್ಷದ ಹುಟ್ಟುಹಬ್ಬದಂದು ಬಾಲಿವುಡ್ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರೊಂದಿಗೆ ಮಾತನಾಡಿದ್ದರು ಉಡುಗೊರೆಯಾಗಿ ಏನು ಕೇಳು ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ್ ಅಕ್ಷಯ್‍ಗೆ 1,600 ಕಿರಿಯ ನೃತ್ಯ ಸಂಯೋಜಕರು ಮತ್ತು ವಯಸ್ಸಾದ ಡ್ಯಾನ್ಸರ್ಸ್ ಮತ್ತು ಸುಮಾರು 2,000 ಬ್ಯಾಗ್ರೌಂಡ್ ಡ್ಯಾನ್ಸರ್ಸ್‍ಗೆ ಒಂದು ತಿಂಗಳ ಪಡಿತರ ಸಹಾಯ ಮಾಡಬಹುದೆಂದು ಕೇಳಿದ್ದರು.

ಗಣೇಶ್ ಆಚಾರ್ಯ ಫೌಂಡೇಶನ್ ಮೂಲಕ ಕಲಾವಿದರಿಗೆ ಸಹಾಯ ಮಾಡಲು ಅಕ್ಷಯ್ ಒಪ್ಪಿಕೊಂಡಿದ್ದಾರೆ. ಕೊರಿಯೋಗ್ರಾಫರ್ ತನ್ನ ಪತ್ನಿ ಆಹಾರದ ಪ್ಯಾಕಿಂಗ್ ಮತ್ತು ವಿತರಣೆಯನ್ನು ನೋಡಿಕೊಳ್ಳುತ್ತಾರೆ. ಇದನ್ನು ಪ್ರದೇಶವ್ಯಾಪಿ ಮಾಡಲಾಗುತ್ತದೆ ಮತ್ತು ಎಲ್ಲಾ ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‍ಗಳನ್ನು ಗಮನದಲ್ಲಿರಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ. ಡ್ಯಾನ್ಸರ್ಸ್ ಮತ್ತು ನೃತ್ಯ ನಿರ್ದೇಶಕರಿಗೆ ಅವಶ್ಯಕ ಇರುವ ಮೂಲಭೂತ ವಸ್ತುಗಳನ್ನು ಕೊಂಡುಕೊಳ್ಳುವ ಹಣವನ್ನು ಅಥವಾ ಕಿಟ್ ಅನ್ನು ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *