ಡೆಲ್ಲಿ: ಕಳೆದ ದಿನ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅಘಾತ ನೀಡಿತ್ತು. ಇಂದು ರಾಜಸ್ಥಾನ್ ವಿರುದ್ಧದ ಪಂದ್ಯದಿಂದಲೇ ಹೊರಗಿಟ್ಟು ಇನ್ನೊಂದು ಶಾಕ್ ನೀಡಿದೆ.

14ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವದ ಬದಲಾವಣೆ ಮಾಡಲಾಗಿತ್ತು. ನಾಯಕನ ಪಟ್ಟದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಹೈದರಾಬಾದ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ. ಇಂದು ಡೆಲ್ಲಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿದೆ. ಕೇನ್ ವಿಲಿಯಮ್ಸನ್ ನಾಯನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಡೇವಿಡ್ ವಾರ್ನರ್ ಮಾತ್ರ ಸ್ಥಾನ ಪಡೆದಿಲ್ಲ. ಹಾಗಾಗಿ ವಾರ್ನರ್ ಇಲ್ಲದ ಹೈದರಾಬಾದ್ ತಂಡವನ್ನು ನೋಡಿದ ಅಭಿಮಾನಿಗಳು ಫ್ರಾಂಚೈಸ್ ವಿರುದ್ಧ ಕಿಡಿಕಾರುತ್ತಿದ್ದಾರೆ.

ಹೈದರಾಬಾದ್ ತಂಡ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಹೈದರಾಬಾದ್ ಪರ ವಾರ್ನರ್ 1015 ರಿಂದ 2019ರ ಮಧ್ಯೆ ಮೂರು ಬಾರಿ ಅತೀ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್‍ನ ಒಡೆಯನಾಗಿದ್ದರು. ಹಾಗೆ ಕಳೆದ 6 ಸೀಸನ್‍ಗಳಲ್ಲಿ ಹೈದರಾಬಾದ್ ತಂಡದ ಪರ 500ಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ವಾರ್ನರ್ ಮಿಂಚಿದ್ದರು.

ವಾರ್ನರ್ ಹೈದರಾಬಾದ್ ತಂಡವನ್ನು 2015, 2016, 2017 ಮತ್ತು 2020ರ ಸೀಸನ್‍ಗಳಲ್ಲಿ ಪ್ಲೇ ಆಪ್ ಹಂತಕ್ಕೆ ಏರಿಸಿದ್ದರು. ಅಷ್ಟೆ ಅಲ್ಲದೆ ಐಪಿಎಲ್‍ನಲ್ಲಿ ವಾರ್ನರ್ 148 ಪಂದ್ಯಗಳನ್ನು ಆಡಿ 140.13 ಸ್ಟ್ರೈಕ್ ರೇಟ್‍ನಲ್ಲಿ 5,447 ರನ್ ಗಳಿಸಿದ್ದಾರೆ. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲೇ 50 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Leave a Reply