ಡಿ ಬಾಸ್‍ಗೆ ನಿರ್ದೇಶಕ ತರುಣ್ ಸುಧೀರ್ ಧನ್ಯವಾದ

ಬೆಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸ್ಯಾಂಡಲ್‍ವುಡ್ ಸ್ಟಾರ್ ನಟ ದರ್ಶನ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚೌಕ ಸಿನಿಮಾ ತೆರೆಕಂಡು ನಾಲ್ಕು ವರ್ಷ ಪೂರೈಸಿದೆ. ಈ ಸಂತೋಷದ ವಿಚಾರವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ತರುಣ್ ಸುಧೀರ್ ಅವರು ದರ್ಶನ್‍ಗೆ ಧನ್ಯವಾದ ಹೇಳುವ ಮೂಲಕವಾಗಿ ಸಂಭ್ರಮಿಸಿದ್ದಾರೆ.

ಚೌಕ ಸಿನಿಮಾದಲ್ಲಿ ಬರೆದ ಅತಿಥಿ ಪಾತ್ರ ಈ ಮಟ್ಟಕ್ಕೆ ಬೆಳೆದು ಒಂದು ದಿನ ದೊಡ್ಡ ಸಿನಿಮಾ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಹೀಗೆ ಒಂದು ದಿನ ದೊಡ್ಡ ಸ್ಟಾರ್‍ ಗೆ ನಿರ್ದೇಶನ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ. ಅಂದಿನಿಂದ ಇಂದಿನವರೆಗೂ ನನಗೆ ‘ರಾಬರ್ಟ್’ ಎಂಬುದು ಸ್ಪೆಷಲ್ ಆಗಿದೆ. ಇದು ಸಾಧ್ಯವಾಗಿಸಿದ್ದಕ್ಕೆ ಡಿ ಬಾಸ್‍ಗೆ ಧನ್ಯವಾದಗಳು ಎಂದು ತರುಣ್ ಸುಧೀರ್ ಟ್ವೀಟ್ ಮಾಡಿ ದರ್ಶನ್ ಮತ್ತು ಸುಧೀರ್ ಒಟ್ಟಿಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ಚೌಕ ದೊಡ್ಡಮಟ್ಟದ ಯಶಸ್ಸನ್ನು ನೀಡಿತ್ತು. ಇದೀಗ ಚಿತ್ರ ತೆರೆಕಂಡು ನಾಲ್ಕು ವರ್ಷ ಪೂರೈಸಿದೆ. ಚೌಕದಲ್ಲಿ ನಟ ದರ್ಶನ್ ‘ರಾಬರ್ಟ್’ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಒಂದು ಪಾತ್ರವು ಕೂಡಾ ಸಿನಿಮಾ ಗೆಲುವಿಗೆ ಕಾರಣವಾಗಿತ್ತು. ಅದೇ ಪಾತ್ರವನ್ನು ಇಟ್ಟುಕೊಂಡು ತರುಣ್ ‘ರಾಬರ್ಟ್’ ಚಿತ್ರವನ್ನು ಮಾಡಿದ್ದಾರೆ. ದರ್ಶನ್ ಅವರ ಸಹಕಾರದಿಂದ ಸಾಧ್ಯವಾಗಿದೆ ಎಂದು ತರುಣ್ ಟ್ವೀಟ್ ಮಾಡುವ ಮೂಲಕವಾಗಿ ನೆನಪಿಸಿಕೊಂಡಿದ್ದಾರೆ.

ಎಲ್ಲೆಡೆ ಸುದ್ದಿಯಲ್ಲಿರುವ ಬಹು ನಿರೀಕ್ಷೆಯ ಚಿತ್ರಗಳಲ್ಲಿ ‘ರಾಬರ್ಟ್’ ಸಿನಿಮಾ ಒಂದಾಗಿದೆ. ಮಾರ್ಚ್ 11 ರಂದು ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳನ್ನು ರಂಜಿಸಲು ತೆರೆಮೇಲೆ ಬರಲಿದೆ.

Comments

Leave a Reply

Your email address will not be published. Required fields are marked *