ಉಡುಪಿ: ಡಿ.ಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆರ್‍ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ರವಿ ಪತ್ನಿ ಕುಸುಮ ಸ್ಪರ್ಧೆ ಸಂಬಂಧ ಪ್ರತಿಕ್ರಿಯಿಸಿ, ಡಿ.ಕೆ ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿ.ಕೆ ರವಿ ಓರ್ವ ದಕ್ಷ ಅಧಿಕಾರಿಯಾಗಿದ್ರೂ ಇಂದು ನಮ್ಮ ಜೊತೆಗಿಲ್ಲ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದರು.

ಡಿ.ಕೆ ರವಿ ಬದುಕಿದ್ದಾಗ ಕುಸುಮಾ ಕುಟುಂಬ ಏನು ಮಾಡಿತ್ತು?, ಡಿ.ಕೆ ರವಿಯ ಮಾವ ಏನು ಮಾಡಿದ್ರು?, ಡಿಕೆ ರವಿ ಸತ್ತ ತಕ್ಷಣ ಕುಸುಮಾ ಅವರು ಎಲ್ಲಿಗೆ ಹೋದರು?, ಯಾಕೆ ಹೋದರು? ಇದೆಲ್ಲವೂ ಚರ್ಚೆಯಾಗುತ್ತದೆ. ಇದಕ್ಕಾಗಿ ಅವರು ರವಿ ಹೆಸರು ಪ್ರಸ್ತಾಪಿಸದೆ ಇರೋದು ಒಳ್ಳೆಯದು. ರವಿ ಬಗ್ಗೆ ಅವರ ಪತ್ನಿಯ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಕಿಡಿಕಾರಿದರು.

ಡಿಕೆ ರವಿ ಸಾವಿನ ಅವರ ತಂದೆ ತಾಯಿಗೆ ಆದ ಅವಮಾನ ಅವರ ಕೆಟ್ಟ ಪರಿಸ್ಥಿತಿ ಎಲ್ಲವೂ ಚರ್ಚೆಯ ವಿಷಯವಾಗಿದೆ. ಚುನಾವಣಾ ವಿಷಯದಲ್ಲಿ ಇದೆಲ್ಕಾ ಪ್ರಸ್ತಾಪ ಆಗೋದು ಒಳ್ಳೆಯದಲ್ಲ. ಒಂದು ವೇಳೆ ಅವಳು ಚರ್ಚೆಗೆ ತೆಗೆದರೆ ನಮ್ಮಲ್ಲೂ ಚರ್ಚೆಗೆ ಸಾಕಷ್ಟು ವಿಚಾರ ಇದೆ ಎಂದು ತಿಳಿಸಿದರು.

Leave a Reply