ಡಿಸಿಎಂ ಪಟ್ಟ ಯಾರಿಗೆ ಸಿಗಬಹುದು? ಲೆಕ್ಕಾಚಾರ ಏನು?

ಬೆಂಗಳೂರು: ಭವಿಷ್ಯದ ದೃಷ್ಟಿಯಿಂದ ಬಲಿಷ್ಟ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಪ್ಲಾನ್ ಮಾಡಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದ ಹೈಕಮಾಂಡ್ ಈ ಬಾರಿ ಯಾರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬಹುದು ಎಂಬ ಕುತೂಹಲ ಮೂಡಿದೆ.

ಇನ್ನೂ ಸಿಎಂ ಯಾರಾಗಬೇಕು ಎಂಬ ವಿಚಾರ ಅಂತಿಮವಾಗದ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಯನ್ನು ಯಾರಿಗೆ ನೀಡಬೇಕು ಎನ್ನುವುದು ಅಂತಿಮವಾಗಿಲ್ಲ. ಬ್ರಾಹ್ಮಣರು ಸಿಎಂ ಆದರೆ ನಾಲ್ವರಿಗೆ ಡಿಸಿಎಂ, ಲಿಂಗಾಯತರು ಸಿಎಂ ಆದರೆ ಮೂವರಿಗೆ ಡಿಸಿಎಂ ಸ್ಥಾನ ಸಿಗುವ ಸಾಧ್ಯತೆಯಿದೆ. ಅದರಲ್ಲೂ ದಲಿತರು, ಒಕ್ಕಲಿಗರು ಡಿಸಿಎಂ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಇದನ್ನೂ ಓದಿ : ಹೊಸ ಕ್ಯಾಬಿನೆಟ್‍ನಲ್ಲಿ ಯುವ ಮುಖಗಳಿಗೆ ಮಣೆ, ಹಳಬರು ಔಟ್ – ಮಾನದಂಡ ಏನು?

ಬ್ರಾಹ್ಮಣರು ಸಿಎಂ ಆದ್ರೆ 4 ಡಿಸಿಎಂಗಳು?
* ಮುರುಗೇಶ್ ನಿರಾಣಿ, ಮಾಜಿ ಸಚಿವ – ಲಿಂಗಾಯತ ಸಮುದಾಯ
* ಶ್ರೀರಾಮುಲು, ಮಾಜಿ ಸಚಿವ – ವಾಲ್ಮೀಕಿ ಸಮುದಾಯ
* ಲಿಂಬಾವಳಿ/ಕಾರಜೋಳ – ದಲಿತ ಸಮುದಾಯ
* ಅಶ್ವಥ್ ನಾರಾಯಣ, ಒಕ್ಕಲಿಗ ಸಮುದಾಯ

ಲಿಂಗಾಯತರು ಸಿಎಂ ಆದ್ರೆ 3 ಡಿಸಿಎಂಗಳು?
* ಅಶ್ವಥ್ ನಾರಾಯಣ – ಒಕ್ಕಲಿಗ ಸಮುದಾಯ
* ಲಿಂಬಾವಳಿ/ಕಾರಜೋಳ ದಲಿತ ಸಮುದಾಯ
* ಶ್ರೀರಾಮುಲು, ಮಾಜಿ ಸಚಿವ, ವಾಲ್ಮೀಕಿ ಸಮುದಾಯ

Comments

Leave a Reply

Your email address will not be published. Required fields are marked *