ಡಿಯು ಕೇಳಿದ್ದ ಆಸೆಯನ್ನು ಈಡೇರಿಸಿ ವಿಶೇಷ ಪತ್ರ ಬರೆದ ಕಿಚ್ಚ

ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಕೇಳಿದ್ದ ವಿಶೇಷ ಆಸೆಯನ್ನು ಅಭಿನಯ ಚಕ್ರವರ್ತಿ ಈಡೇರಿಸಿದ್ದು, ಮನೆ ಮಂದಿ ಸಂಭ್ರಮಿಸಿದ್ದಾರೆ.

ಇಲ್ಲಿವರೆಗೂ ಈಡೇರದ ಆಸೆಯನ್ನು ಮನೆಯವರು ಬಿಗ್‍ಬಾಸ್ ಮನೆಯಲ್ಲಿ ಇಟ್ಟಿರುವ ಕಿವಿ ಆಕೃತಿಯ ಮುಂದೆ ಹೇಳಿಕೊಳ್ಳಿ, ಇಡೇರಿಸಲು ಸಾಧ್ಯವಾರೆ ಖಂಡಿತಾ ಬಿಗ್‍ಬಾಸ್ ಈಡೇರಿಸುತ್ತಾರೆ ಎಂದು ಸೂಚನೆಯನ್ನು ನೀಡಲಾಗಿತ್ತು. ಸ್ಪರ್ಧಿಗಳು ಮಾತ್ರ ವಿಭಿನ್ನವಾದ ಕೋರಿಕೆಯನ್ನು ಇಟ್ಟಿದ್ದರು. ಮನೆಗೆ ಫೋನ್ ಮಾಡಬೇಕು, ಹೆತ್ತವರ ಆಶಿರ್ವಾದಬೇಕು, ನನ್ನ ಕುಟುಂಬ ಈ ಮನೆಗೆ ಬರಬೇಕು ಎಂದು ಹೀಗೆ ವಿವಿಧ ಕೋರಿಕೆ ಇಟ್ಟವರ ಮಧ್ಯೆ ದಿವ್ಯಾ ಉರುಡುಗ ಕೊಂಚ ವಿಭಿನ್ನವಾಗಿ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು. ಸುದೀಪ್ ಸರ್ ಮಾಡಿರುವ ಅಡುಗೆಯನ್ನು ನಾವೆಲ್ಲ ಸವಿಯಬೇಕು ಎಂದು ಬೇಡಿಕೆ ಇಟ್ಟಿದ್ದರು.

ಬಿಸ್‍ಬಾಸ್‍ಮನೆ ಮಂದಿ ಹಸಿವಿನಿಂದ ಕುಳಿತಿದ್ದರು. ಆಗ ಸುದೀಪ್ ಅವರು ವಾಯ್ಸ್ ಕೇಳಿಸುತ್ತದೆ ನಾನು ನೀವು ಇಷ್ಟಪಟ್ಟಂತೆ ಅಡುಗೆ ಮಾಡಿಕಳುಹಿಸಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ಮನೆಮಂದಿ ಸುದೀಪ್ ಅವರ ಸರ್‍ಪ್ರೈಸ್ ನೋಡಿ ಸಖತ್ ಖುಷಿಯಾಗಿದ್ದಾರೆ.

ಆಗ ದಿವ್ಯಾ ಅವರು ಇದೇ ನನ್ನ ವಿಶ್ ಆಗಿತ್ತು ಎಂದು ಜೋರಾಗಿ ಕೂಗಿದ್ದಾರೆ. ಊಟದ ಜೊತೆಗೆ ಒಂದು ಲೇಟರ್ ಅನ್ನು ದಿವ್ಯಾಗೆ ಕಳುಹಿಸಿದ್ದಾರೆ. ಡಿಯು ಅವರೇ ಕೇಳಿದ್ರಿ ನೀವು ಊಟ, ಪ್ರೀತಿಯಿಂದ ತಿನ್ನುತ್ತ ಬಿಡಿ ಅರವಿಂದ್ ಮೇಲಿನ ನೋಟ ಎಂದು ಬರೆದು ಕಳುಹಿಸಿದ್ದಾರೆ. ಮನೆ ಮಂದಿ ಸುದೀಪ್ ಅವರ ಈ ಸರ್ಪ್ರೈಸ್ ನೋಡಿ ಕುಣಿದು ಕುಪ್ಪಳಿಸಿದ್ದಾರೆ.

ಈ ಹಿಂದೆ ಕೊರೊನಾ ಸಮಯದಲ್ಲಿ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರಾದಾಗ ಸ್ಪರ್ಧಿಗಳು ಒಟ್ಟಾಗಿ ಸೇರಿ ಅಡುಗೆ ತಯಾರಿಸಿ ಸುದೀಪ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಮನೆಂದಿಗೆ ಪ್ರೀತಿಯಿಂದ ಸುದೀಪ್ ಅವರು ಊಟವನ್ನು ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *