ಹೈದರಾಬಾದ್: ಆಂಧ್ರ ಪ್ರದೇಶ ಕರ್ನೂಲ್‌ನಲ್ಲಿ ಮಹಾಮಾರಿ ಕೊರೊನಾದಿಂದ 105 ವರ್ಷದ ಅಜ್ಜಿ ಚೇತರಿಸಿಕೊಂಡಿದ್ದಾರೆ.
ಬಿ.ಮೋಹನಮ್ಮ ಕೊರೊನಾದಿಂದ ಗೆದ್ದ 105 ವರ್ಷದ ಅಜ್ಜಿ. ಮೋಹನಮ್ಮ ಕಳೆದ ತಿಂಗಳು ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ನಂತರ ಜುಲೈ 13 ರಂದು ಅವರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇತ್ತೀಚೆಗೆ ಅಜ್ಜಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. “ಇದು ಹೆಚ್ಚು ಆತ್ಮವಿಶ್ವಾಸ, ಸರಿಯಾದ ಆಹಾರ, ಔಷಧಿ ಮತ್ತು ಯೋಗದಿಂದ ಮಾತ್ರ ಸಾಧ್ಯ. ಜೊತೆಗೆ ಪ್ರತಿದಿನ ಸಮತೋಲಿತ ಆಹಾರ ಸೇವಿಸುತ್ತಿದ್ದೆ. ಅಲ್ಲದೇ ಧ್ಯಾನ ಮತ್ತು ವಾಕಿಂಗ್ ಮಾಡುತ್ತಿದ್ದೆ ಎಂದಿದ್ದಾರೆ.
ಕರ್ನೂಲ್‌ನಲ್ಲಿ ಅಜ್ಜಿ ತಮ್ಮ ಮಗನೊಂದಿಗೆ ವಾಸಿಸುತ್ತಿದ್ದು, ಇವರಿಗೆ 26 ಮೊಮ್ಮಕ್ಕಳು. ಅಜ್ಜಿ ವಾಸಿಸುವ ಬೀದಿ ಕರ್ನೂಲ್‌ನಲ್ಲಿ ಹೆಚ್ಚು ಕೊರೊನಾ ಪ್ರಕರಣ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿವೆ.

ಸಮತೋಲಿತ ಆಹಾರ, ಔಷಧಿ ಮತ್ತು ಧ್ಯಾನದಂತಹ ಅಭ್ಯಾಸಗಳು ಅವರ ಚೇತರಿಕೆಗೆ ಸಹಾಯ ಮಾಡಿದವು. ಅವರು ಆಸ್ಪತ್ರೆಯ ಸಿಬ್ಬಂದಿಗೆ ಭಯವಿಲ್ಲದೆ ಸಹಕರಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಜಿ.ನರೇಂದ್ರನಾಥ ರೆಡ್ಡಿ ಹೇಳಿದ್ದಾರೆ. ಕೊರೊನಾ ಪ್ರೋಟೋಕಾಲ್ ಪ್ರಕಾರ 12 ದಿನಗಳ ನಂತರ ಅಜ್ಜಿಯನ್ನು ಬಿಡುಗಡೆ ಮಾಡಲಾಗಿದೆ.

Leave a Reply