ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ- ರೈತ ಮುಖಂಡರಿಗೆ ಲುಕ್‍ಔಟ್ ನೋಟಿಸ್ ಜಾರಿ

ನವದೆಹಲಿ: ಗಣರಾಜೋತ್ಸವದಂದು ರೈತಸಂಘಟನೆಯು ಕೃಷಿ ಮಸೂದೆಯನ್ನು ವಿರೋಧಿಸಿ ಟ್ರಾಕ್ಟರ್ ರ‍್ಯಾಲಿ ನಡೆಸಿತ್ತು. ಈ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿ ಒಬ್ಬ ಯುವಕ ಮೃತಪಟ್ಟಿದ್ದ. ಇನ್ನೂ ಪೊಲೀಸರಿಗೆ ಮತ್ತು ಹಲವು ವಾಹನಗಳಿಗೆ ದಾಳಿ ಮಾಡಿ ರೈತರು ಆಕ್ರೋಶ ಮೆರೆದಿದ್ದರು. ಈ ಘಟನೆ ಬೆನ್ನಲ್ಲೇ ರೈತ ಮುಖಂಡರಿಗೆ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಸಾವಿರಾರೂ ರೈತರು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಏಕಾಏಕಿ ಪ್ರತಿಭಟನೆಯ ಕಾವು ಏರಿಕೆಗೊಂಡ ಪರಿಣಾಮ ಪೊಲೀಸರು ಮತ್ತು ರೈತರ ನಡುವೆ ಘರ್ಷನೆ ನಡೆದಿತ್ತು. ಘಟನೆಯಲ್ಲಿ ಪೊಲೀಸರಿಗೆ ಮತ್ತು ನೂರಾರು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಡೆಲ್ಲಿ ಪೊಲೀಸರು ರೈತ ಹೋರಾಟದಲ್ಲಿ ಭಾಗವಹಿಸಿದ ರೈತರ ಪಾಸ್ಪೋರ್ಟ್‍ನ್ನು ವಶಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಘಟನೆಯ ನಂತರ ರೈತರು ತಮ್ಮ ಮೇಲೆ ಕೈಗೊಂಡ ಕ್ರಮವನ್ನು ಪ್ರಶ್ನಿಸಿದ್ದಾರೆ. ಇದನ್ನು ಸಮರ್ಥಿಸಿಕೊಂಡಿರುವ ಪೊಲೀಸರು ಹಿಂಸಾಚಾರಕ್ಕೆ ಕಾರಣವಾಗಿರುವ ವ್ಯಕ್ತಿಗಳನ್ನು ತಿಳಿಸುವಂತೆ ರೈತರೊಂದಿಗೆ ಮಾತುಕತೆ ನಡೆಸಿ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ 25 ರೈತರ ಮೇಲೆ ಎಫ್‍ಐಆರ್ ದಾಖಲಿಸಲಾಗಿದ್ದು. ಇನ್ನೂ 37 ರೈತರ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಸಂಘರ್ಷದಲ್ಲಿ 300 ಪೊಲೀಸರು ಗಾಯಗೊಂಡಿದ್ದರು.

 

ಈಗಾಗಲೇ ಪೊಲೀಸರು ಕೆಂಪುಕೋಟೆಗೆ ನುಗ್ಗಿ ಕಿಸಾನ್ ಧ್ವಜವನ್ನು ಹಾರಿಸಿ, ಗುಮ್ಮಟದ ಮೇಲೆ ಸಿಖ್ ಧ್ವಜವನ್ನು ನೆಟ್ಟ ರೈತರ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಿದ್ದು, ಈ ಕಾರ್ಯಚರಣೆಗಾಗಿ ದೆಹಲಿಗೆ ವಿಶೇಷ ಪೊಲೀಸ್ ತಂಡ ಭೇಟಿ ನೀಡಿ ಅಲ್ಲಿನ ಸಿಸಿಟಿವಿ ದೃಶ್ಯವಳಿಗಳನ್ನು ಗಮನಿಸುವ ಕಾರ್ಯದಲ್ಲಿ ತೊಡಗಿದೆ.

Comments

Leave a Reply

Your email address will not be published. Required fields are marked *