ಝೂಮ್ ಕಾಲ್ ವೇಳೆ ಪತಿಗೆ ಕಿಸ್ ನೀಡಲು ಬಂದ ಪತ್ನಿ- ವೀಡಿಯೋ ವೈರಲ್

ನವದೆಹಲಿ: ಮೀಟಿಂಗ್ ನಡೆಯುತ್ತಿರುವಾಗ ಝೂಮ್ ಕಾಲ್‍ನಲ್ಲಿ ಪತಿ ಮಾತನಾಡುತ್ತಿರುವಾಗಲೇ ಪತ್ನಿ ಕಿಸ್ ನೀಡಲು ಮುಂದಾಗಿದ್ದು, ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಕೈಗಾರಿಕೋದ್ಯಮಿ ಹರ್ಷ್ ಗೊಯಂಕಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಝೂಮ್ ಕಾಲ್ ಸೋ ಫನ್ನಿ’ ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ಸಹ ವೈರಲ್ ಆಗಿರುವ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಝೂಮ್ ಕಾಲ್ ಮೀಟಿಂಗ್ ವೇಳೆ ವಿವಿಧ ವಿಷಯಗಳ ಕುರಿತು ವ್ಯಕ್ತಿ ಚರ್ಚಿಸುತ್ತಿದ್ದು, ಈ ವೇಳೆ ಅವರ ಪತ್ನಿ ರೂಮ್‍ಗೆ ಆಗಮಿಸಿ, ಬರುತ್ತಿದ್ದಂತೆಯೇ ಕಿಸ್ ನೀಡಲು ಮುಂದಾಗಿದ್ದಾರೆ. ತಕ್ಷಣವೇ ವ್ಯಕ್ತಿ ತನ್ನ ಲ್ಯಾಪ್‍ಟಾಪ್ ಕಡೆ ತಿರುಗಿ ನೋಡಿ ಸಿಗ್ನಲ್ ಮಾಡಿದ್ದಾರೆ. ಬಳಿಕ ಪತ್ನಿ ಸ್ಮೈಲ್ ಮಾಡಿ ಹಿಂದೆ ಸರಿದಿದ್ದಾರೆ.

ಈ ವೀಡಿಯೋವನ್ನು ಎಂಜಾಯ್ ಮಾಡಿರುವ ಆನಂದ್ ಮಹೀಂದ್ರಾ, ಹ..ಹ.. ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಹೊಗಳಿಕೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ವ್ಯಕ್ತಿ ಸಿಟ್ಟಾಗಿದ್ದರಿಂದ ಈ ಬಿರುದಿನಿಂದ ವಂಚಿತರಾಗಿದ್ದಾರೆ ಎಂದು ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ.

ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಸಹ ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವು ಯಾಂತ್ರಿಕ ಪತಿಯಂದಿರು ಇಂತಹ ಅಪರೂಪದ, ನೆನಪಿನಲ್ಲಿಟ್ಟುಕೊಳ್ಳಬಹುದಾದ ಸಿಹಿ ಕ್ಷಣಗಳನ್ನು ಆನಂದಿಸಲು ಹಿಂಜರಿಯುತ್ತಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *