ಝೂಮ್‌, ಗೂಗಲ್‌ ಮೀಟ್‌ಗೆ ಸ್ಪರ್ಧೆ ನೀಡಲು ಬಂದಿದೆ ಜಿಯೋ ಮೀಟ್‌

ಮುಂಬೈ: ಆನ್‌ಲೈನ್‌ ವಿಡಿಯೋ ಅಪ್ಲಿಕೇಶನ್‌ಗಳಾದ ಝೂಮ್‌ ಮತ್ತು ಗೂಗಲ್‌ ಮೀಟ್‌ಗೆ ಸ್ಪರ್ಧೆ ನೀಡಲು ಸ್ವದೇಶಿ ಜಿಯೋ ಮೀಟ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

ಜಿಯೋ ಮೊದಲೇ ಆಪ್‌ ಬಿಡುಗಡೆ ಮಾಡಿದ್ದರೂ ಬೀಟಾ ಅವೃತ್ತಿ ಕೆಲವರಿಗೆ ಮಾತ್ರ ಸಿಕ್ಕಿತ್ತು. ಈಗ ಅಧಿಕೃತವಾಗಿ ಆಂಡ್ರಾಯ್ಡ್‌, ಐಓಎಸ್‌ ಪ್ಲೇ ಸ್ಟೋರ್‌ ಜೊತೆಗೆ ಡೆಸ್ಕ್‌ಟಾಪ್‌ ಮೂಲಕವೂ ಉಚಿತವಾಗಿರುವ ಜಿಯೋ ಮೀಟ್‌ ಬಳಸಬಹುದು.

ಏನಿದರ ವಿಶೇಷತೆ?
720 ಪಿಕ್ಸೆಲ್‌ ಎಚ್‌ಡಿ ಕ್ವಾಲಿಟಿಯೊಂದಿಗೆ ಜಿಯೋ ಮೀಟ್‌ ಅನಿಯಮಿತ ಫ್ರೀ ಕಾಲ್‌ ನೀಡುತ್ತದೆ. ಏಕಾಕಾಲಕ್ಕೆ 100 ಮಂದಿ ಸೇರಬಹುದಾಗಿದ್ದು 24 ಗಂಟೆಗಳ ಕಾಲ ನಿರಂತರವಾಗಿ ಕನ್ಫರೆನ್ಸ್‌ ಮಾಡಬಹುದಾಗಿದೆ.

ಕರೆಯ ಆರಂಭದಲ್ಲಿ ಯಾವುದೇ ಕೋಡ್‌ ಹಾಕುವ ಅಗತ್ಯವಿಲ್ಲ. ಡೆಸ್ಕ್‌ಟಾಪ್‌ಮೂಲಕ ಯಾರೆಲ್ಲ ಸೇರುತ್ತಾರೋ ಅವರಿಗೆ ಹೋಸ್ಟ್‌ ಇಮೇಲ್‌ ಮೂಲಕ ಲಿಂಕ್‌ ಕಳುಹಿಸಿದರೆ ನೇರವಾಗಿ ಮೀಟಿಂಗ್‌ಗೆ ಜಾಯಿನ್‌ ಆಗಬಹುದು. ಅಪ್ಲಿಕೇಶನ್‌ ಅಲ್ಲದೇ ಗೂಗಲ್‌ ಕ್ರೋಮ್‌ ಮತ್ತು ಮೊಝಿಲ್ಲಾ ಫೈರ್‌ಫಾಕ್ಸ್‌ ಬ್ರೌಸರ್‌ ಮೂಲಕವೂ ಜಿಯೋಮೀಟ್‌ ಬಳಸಬಹುದು. 26 ಎಂಬಿ ಗಾತ್ರದ ಈ ಆಪ್‌ ಆಂಡ್ರಾಯ್ಡ್‌ 5.0 ಲಾಲಿಪಪ್‌ ಓಎಸ್‌ ಸೇರಿದಂತೆ ನಂತರದ ಆವೃತ್ತಿಯಲ್ಲಿ ಕಾರ್ಯಾಚರಿಸುತ್ತದೆ.

Comments

Leave a Reply

Your email address will not be published. Required fields are marked *