ಜ.2 ರಂದು ಕರ್ನಾಟಕದಲ್ಲಿ ವಾಕ್ಸಿನ್‌ ಡ್ರೈ ರನ್‌ – 83 ಕೋಟಿ ಸಿರಿಂಜ್‌ ಖರೀದಿಗೆ ಮುಂದಾದ ಸರ್ಕಾರ

ನವದೆಹಲಿ: ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವ್ಯಾಕ್ಸಿನ್ ಡ್ರೈ ರನ್‍ಗೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯದಲ್ಲಿ ಜ.2 ರಂದು ಬೆಂಗಳೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಕ್ಸಿನ್ `ಡ್ರೈ ರನ್’ ನಡೆಯಲಿದೆ.

ಸ್ಟೋರೇಜ್‍ಗಳಿಂದ ವಿತರಣಾ ಕೇಂದ್ರಕ್ಕೆ ಲಸಿಕೆ ಸಾಗಾಟ ಪ್ರಕ್ರಿಯೆ, ಲಸಿಕೆ ನೀಡಿಕೆ, ಕೋ-ವಿನ್ ಆ್ಯಪ್‍ನಲ್ಲಿ ಡೇಟಾ ಎಂಟ್ರಿ, ಬೂತ್‍ಗಳಲ್ಲಿ ಜನಸಂದಣಿ ನಿಯಂತ್ರಣ, ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಡ್ರೈ ರನ್ ನಡೆಯಲಿದೆ.

ಸಿರಿಂಜ್‌ ಖರೀದಿಗೆ ಟೆಂಡರ್‌:
ಲಸಿಕೆಗೆ ಕೌಂಟ್‍ಡೌನ್ ಶುರುವಾಗಿರುವಾಗಲೇ 83 ಕೋಟಿ ಸಿರಿಂಜ್ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, 35 ಕೋಟಿ ಸಿರಿಂಜ್‌ ಖರೀದಿಗೆ ಬಿಡ್ ಕೂಡ ಕರೆದಿದೆ. ಜೊತೆಗೆ ಬಳಸಿದ ಸಿರಿಂಜ್ ನಿಷ್ಕ್ರಿಯಕ್ಕೂ ಪ್ಲಾನ್ ಸಿದ್ಧಪಡಿಸಿದೆ.

ರಾಜ್ಯಗಳಿಗೆ `ಆಟೋ ಡಿಸೇಬಲ್ (ಎಡಿ) ಸಿರೀಂಜ್’ಗಳನ್ನು ಬಳಸಿ, ಯಾವುದೇ ಕಾರಣಕ್ಕೂ ಡ್ಯಾಮೇಜ್ ಆಗಿರುವ, ಅವಧಿ ಮುಗಿದಿರುವ ಎಡಿ ಸಿರಿಂಜ್ ಪ್ಯಾಕ್‍ಗಳನ್ನು ಬಳಸಬೇಡಿ, ಸಿರಿಂಜ್‍ಗಳನ್ನು ಮೊದಲೇ ತುಂಬಿಸಿಡಬೇಡಿ, ಬಳಕೆ ಮಾಡಿದ ತಕ್ಷಣವೇ ಮುರಿದು ರೆಡ್ ಬ್ಯಾಗ್‍ಗೆ ಹಾಕಿ ಎಂದು ರಾಜ್ಯಗಳಿಗೆ ಮಾರ್ಗಸೂಚಿ ನೀಡಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಯಾರಿಗೆ ಮೊದಲು ಸಿಗುತ್ತೆ ಲಸಿಕೆ?
ಹಂತ 1 – 1 ಕೋಟಿ ಆರೋಗ್ಯ ಕಾರ್ಯಕರ್ತರು
ಹಂತ 2 – 2 ಕೋಟಿ ಮುಂಚೂಣಿ ಕಾರ್ಯಕರ್ತರು(ಪೊಲೀಸರು, ಗೃಹ ರಕ್ಷಕರು, ಅರೆಸೇನಾ ಪಡೆ, ಪೌರ ಕಾರ್ಮಿಕರು, ಅಗ್ನಿಶಾಮಕ ದಳ, ಜೈಲು ಸಿಬ್ಬಂದಿ, ವಿಪತ್ತು ನಿರ್ವಹಣಾ ಸಿಬ್ಬಂದಿ)
ಹಂತ 3 – 50 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 50 ವರ್ಷದೊಳಗಿನವರು.

Comments

Leave a Reply

Your email address will not be published. Required fields are marked *