ಜೂ.30ರವರೆಗೆ ಲಾಕ್‍ಡೌನ್ ವಿಸ್ತರಣೆ- ಜೂನ್ 8ರಿಂದ ಮಾಲ್, ದೇವಸ್ಥಾನ ಓಪನ್

– ರಾತ್ರಿ 9ರಿಂದ ಬೆಳಗಿನ ಜಾವ 5ರವರೆಗೆ ಕರ್ಫ್ಯೂ

ನವದೆಹಲಿ: ಜೂನ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಅದೇಶ ಹೊರಡಿಸಿದೆ.

ಲಾಕ್‍ಡೌನ್ 4.0 ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಲಾಕ್‍ಡೌನ್ 5.0ನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಮುಖವಾಗಿ ಜೂನ್ 2ರಿಂದ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಅಲ್ಲದೆ ರಾತ್ರಿ 9ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕಫ್ರ್ಯೂ ವಿಧಿಸಿದೆ. ಚಿತ್ರಪ್ರದರ್ಶನ ನಿಷೇಧವನ್ನು ಮುಂದುವರಿಸಿದೆ. ಆಯಾ ನಗರಗಳ ಪರಿಸ್ಥಿತಿ ಆಧರಿಸಿ ಮೆಟ್ರೋ ರೈಲುಗಳ ಸಂಚಾರ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವನ್ನು ನೀಡಿದೆ.

ಏನಿರುತ್ತೆ?
> ಜೂನ್ 8 ರಿಂದ ಎಲ್ಲ ಧಾರ್ಮಿಕ ಕೇಂದ್ರಗಳು ಓಪನ್
> ಜೂನ್ 8 ರಿಂದ ಶಾಪಿಂಗ್ ಮಾಲ್ ಗಳು ತೆರೆಯಲು ಅನುಮತಿ
> ಹೋಟೆಲ್, ರೆಸ್ಟೋರೆಂಟ್
> ಬಸ್ ಸೇರಿದಂತೆ ಸಾರಿಗೆ ವ್ಯವಸ್ಥೆಗೆ ಷರತ್ತು ಬದ್ಧ ಅನುಮತಿ
> ಅಂತರಾಷ್ಟ್ರೀಯ ವಿಮಾನ ಸಂಚಾರ (ಕೇಂದ್ರದ ಅನುಮತಿ/ ತುರ್ತು ಸೇವೆ)

* ಏನಿರಲ್ಲ?
> ಶಾಲಾ ಕಾಲೇಜು/ ತರಬೇತಿ ಕೇಂದ್ರ ತೆರೆಯುವಂತಿಲ್ಲ
> ಮೆಟ್ರೋ ರೈಲು
> ಸಿನಿಮಾ ಹಾಲ್, ಜಿಮ್ ಸೆಂಟರ್, ಸ್ವಿಮಿಂಗ್ ಪೂಲ್, ಮನರಂಜನಾ ಕೇಂದ್ರ/ಪಾರ್ಕ್, ಬಾರ್, ಸಭಾಂಗಣ ಮತ್ತು ಅತಿ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ.
> ಸಾರ್ವಜನಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ ಸಾಂಸ್ಕೃತಿಕ/ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.

* ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಯಥಾಸ್ಥಿತಿ:
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸದ್ಯ ಇರುವ ಸಡಿಲಿಕೆಗಳೊಂದಿಗೆ ಯಥಾಸ್ಥಿತಿ ಮುಂದುವರಿಯಲಿದೆ. ಜೂನ್ 30ರವರೆಗೆ ಲಾಕ್‍ಡೌನ್ ನಿಯಮಗಳು ಅನ್ವಯವಾಗಲಿವೆ. ವೈದ್ಯಕೀಯ ಸೇವೆ, ಮೆಡಿಕಲ್, ದಿನಬಳಕೆ ಸರಕು ಪೂರೈಕೆ ಸೇರಿದಂತೆ ಅವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ.

60 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮನೆಯಿಂದ ಹೊರ ಬರುವಂತಿಲ್ಲ. ಇನ್ನು ಅಂತರ್ ರಾಜ್ಯ ಪ್ರಯಾಣಕ್ಕೆ ಪಾಸ್ ತೆಗೆದುಕೊಳ್ಳುವಂತಿಲ್ಲ. ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

Comments

Leave a Reply

Your email address will not be published. Required fields are marked *