ಜೂ. ಚಿರುವನ್ನು ಎತ್ತಿ ಮುದ್ದಾಡಿದ ಧ್ರುವ ಸರ್ಜಾ

ಬೆಂಗಳೂರು: ಮೇಘನಾ ರಾಜ್‌ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಧ್ರುವ ಸರ್ಜಾ ಜೂನಿಯರ್‌ ಚಿರಂಜೀವಿಯನ್ನು ಎತ್ತಿ ಮುದ್ದಾಡಿದ್ದಾರೆ.

ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮೇಘನಾ ರಾಜ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಮಗು ಜನಿಸಿದ ವಿಚಾರ  ತಿಳಿದು ಕೂಡಲೇ ಧ್ರುವ ಸರ್ಜಾ ಖಾಸಗಿ ಆಸ್ಪತ್ರೆಗೆ ಆಗಮಿಸಿ  ಮಗುವನ್ನು ಎತ್ತಿ ಸಂಭ್ರಮಿಸಿದ್ದಾರೆ.

ಇನ್‌ಸ್ಟಾದಲ್ಲಿ ಧ್ರುವ ಅವರು ಬಾಯ್ ಬೇಬಿ‌ ಎಂದು ಬರೆದರೆ ಪತ್ನಿ ಪ್ರೇರಣಾ ಅವರು ಮೇಘನಾ ಚಿರು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಸುಂದರ್ ರಾಜ್, ಪ್ರಮೀಳಾ , ಪನ್ನಗಾಭರಣ ಹಾಗೂ ಮೇಘನಾ ಸ್ನೇಹಿತರು ಖಾಸಗಿ ಆಸ್ಪತ್ರೆಯ ಬಳಿಯೇ ಇದ್ದು ಮೇಘನಾ ಆರೈಕೆ ಮಾಡುತ್ತಿದ್ದಾರೆ. ಗಂಡು ಮಗು ಜನನವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಅಕ್ಟೋಬರ್‌ ತಿಂಗಳಲ್ಲಿ ಸರ್ಜಾ ಕುಟುಂಬಕ್ಕೆ ವಿಶೇಷ ತಿಂಗಳು. ಇದರ ಜೊತೆ ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಮಗು ಜನಿಸಿದ್ದು ವಿಶೇಷ. ಅಕ್ಟೋಬರ್‌ 17 ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಆಗಿದ್ದರೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿತ್ತು.

ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಈಗ ಆಸ್ಪತ್ರೆಯಲ್ಲೂ ಮೇಘನಾ ವಿಶ್ರಾಂತಿ ಪಡೆಯುತ್ತಿರುವ ವಾರ್ಡ್‌ನಲ್ಲಿ ಚಿರಂಜೀವಿ ಜೊತೆಗಿರುವ ಫೋಟೋಗಳನ್ನು ಹಾಕಲಾಗಿತ್ತು.

ಬೆಳ್ಳಿ ತೊಟ್ಟಿಲು ಖರೀದಿ: ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದರು. ನವರತ್ನ ಜ್ಯೂವೆಲರ್ಸ್ ನಲ್ಲಿ ಸುಮಾರು 10 ಲಕ್ಷ ರೂ.ನೀಡಿ ಬೆಳ್ಳಿಯ ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಿದ್ದರು.

ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.

Comments

Leave a Reply

Your email address will not be published. Required fields are marked *