ಜುಲೈ 17ರಿಂದ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ- ಮಾರ್ಗಸೂಚಿಗಳೇನು?

ತಿರುವನಂತಪುರಂ: ಸುಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವನ್ನು ಜುಲೈ 17 ರಿಂದ 21ರ ವರೆಗೆ ತೆರೆಯಲಾಗುತ್ತಿದ್ದು, ಭಕ್ತರು ಅಯ್ಯಪ್ಪನ ದರ್ಶನ ಪಡೆಯಬಹುದಾಗಿದೆ.

ಕೊರೊನಾ 2ನೇ ಅಲೆ ಮಧ್ಯೆ ತಿಂಗಳ ಪೂಜೆಯನ್ನು ನೆರವೇರಿಸಲು ಜುಲೈ 17 ರಿಂದ 21ರ ವರೆಗೆ ಐದು ದಿನಗಳ ಅವಧಿಗೆ ದೇವಸ್ಥಾನವನ್ನು ಮತ್ತೆ ತೆರೆಯಲಾಗುತ್ತಿದೆ ಎಂದು ತಿರುವಾಂಕುರ್‌ ದೇವಸ್ವಂ ಮಂಡಳಿ ತಿಳಿಸಿದೆ.

ಕೊರೊನಾ ಹೊಸ ಮಾರ್ಗಸೂಚಿಗಳ ಪ್ರಕಾರ ಲಸಿಕೆ ಪಡೆದ ಸರ್ಟಿಫಿಕೇಟ್ ಅಥವಾ 48 ಗಂಟೆಗಳೊಳಗೆ ಟೆಸ್ಟ್ ಮಾಡಿಸಿದ ಕೋವಿಡ್-19 ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಅಲ್ಲದೆ ಆನ್‍ಲೈನ್ ಮೂಲಕ ಬುಕಿಂಗ್ ಮಾಡಿಕೊಂಡ ಗರಿಷ್ಠ 5 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಕೇರಳ ಪೊಲೀಸರು ಹಾಗೂ ದೇವಸ್ವಂ ಮಂಡಳಿ ಕಳೆದ ವರ್ಷ ಹೊಸ ಆನ್‍ಲೈನ್ ಪೋರ್ಟಲ್ ಲಾಂಚ್ ಮಾಡಿದ್ದು, ಇದರ ಮೂಲಕವೇ ವಚ್ರ್ಯೂಲ್ ಕ್ಯೂ, ಪ್ರಸಾದ, ಪೂಜೆ, ವಾಸ್ತವ್ಯ, ಕಾಣಿಕೆ ಬುಕ್ ಮಾಡಬೇಕು. ಈ ಮೂಲಕ ಗಲಾಟೆ ಮುಕ್ತ ದರ್ಶನಕ್ಕೆ ದೇವಸ್ಥಾನ ಮಂಡಳಿ ವ್ಯವಸ್ಥೆ ಕಲ್ಪಿಸಿದೆ. ರಿಜಿಸ್ಟ್ರೇಶನ್ ಮಾಡಲು ಮೊಬೈಲ್ ನಂಬರ್, ಇ-ಮೇಲ್ ಐಡಿ ಕಡ್ಡಾಯವಾಗಿದೆ.

Comments

Leave a Reply

Your email address will not be published. Required fields are marked *