ಜೀವನವೇ ಚಿತ್ತಲ್ ಪತ್ತಲು ಎಂದಿದ್ಯಾಕೆ ರಘು!

ರಘು ವೈನ್‍ಸ್ಟೋರ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಾಸ್ಯ ಮಾಡುವ ಮೂಲಕ ಫೇಮಸ್ ಆಗಿರುವ ರಘು. ನಿನ್ನೆ ಬಿಗ್‍ಬಾಸ್ ಮನೆಯಲ್ಲಿ ಯುವರಾಜರಾಗಿ ಮಿಂಚಿದ್ದಾರೆ. ಬಿಗ್‍ಬಾಸ್ ನಿನ್ನೆ ನೀಡಿದ್ದ ಟಾಸ್ಕ್‍ನಲ್ಲಿ ವಿಶ್ವನಾಥ್ ರಾಜನಾಗಿ, ವೈಷ್ಣವಿ ಗೌಡ ಹಾಗೂ ನಿಧಿ ಸುಬ್ಬಯ್ಯ ವೈಭೋಗದ ಅರಸಿಯರಾಗಿ ಅಭಿನಯಿಸಿದ್ದರು. ಈ ವೇಳೆ ಮಹಾರಾಜ ವಿಶ್ವನಾಥ್‍ಗೆ ಪುತ್ರನಾಗಿ ರಘು ನಟಿಸಿದ್ದು, ಎಲ್ಲರಿಗೂ ಮನರಂಜನೆ ನೀಡಿದ್ದಾರೆ.

ನಿನ್ನೆ ಮನೆಯ ಸದಸ್ಯರೆಲ್ಲರೂ ಒಂದೊಂದು ರೀತಿಯ ಪಾತ್ರ ನಿರ್ವಹಿಸಿದರು. ಈ ವೇಳೆ ವೈಷ್ಣವಿ ಗೌಡ ಬಸವಣ್ಣನವರ ವಚನಕ್ಕೆ ಅಭಿನಯ ಮಾಡಿದರೆ, ನಿಧಿ ಪಂಚರಂಗಿ ಸಿನಿಮಾದ ಗೀತೆಯನ್ನು ಹೇಳಿದರು. ನಂತರ ಬಂದ ರಘು ನಾನು ಚಿಕ್ಕವನಾಗಿದ್ದಾಗ ವಿದ್ಯಾಭ್ಯಾಸಕ್ಕೆಂದು ನನ್ನ ತಂದೆ-ತಾಯಂದಿರು ನನ್ನನ್ನು ಹೊರದೇಶಕ್ಕೆ ಕಳುಹಿಸಿದ್ದರು. ಅಲ್ಲಿ ನಾನು ಈ ಕಲೆಯನ್ನು ಕಲಿತುಕೊಂಡು ಬಂದಿದ್ದೇನೆ. ಅಲ್ಲಿಗೆ ಹೋದ ಮೇಲೆ ನನ್ನ ಜೀವನ ಹಾಳಾಗಿ ಹೋಗಿ, ಚಿತ್ತಲ್ ಪತ್ತಲ್ ಆಗೋಯ್ತು. ಅದರ ಬಗ್ಗೆ ನಾನು ಬರೆದಿರುವ ಈ ಚಿಕ್ಕ ಹಾಡನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ ಎಂದು ಹೇಳಿದರು.

ನಂತರ, ಕೂತು ಕೇಳಿ ನೋಡಿ ಈ ಕ್ಯಾಂಡಿಡೆಟ್ ಸ್ಟೋರಿ ಎಂದು ರಘು ಹಾಡು ಹೇಳಲು ಆರಂಭಿಸಿದರು. ಈ ವೇಳೆ ಮನೆಯ ಸದಸ್ಯರು ಹಾಡಿಗೆ ಚಪ್ಪಾಳೆ ತಟ್ಟಿದರೆ, ಶಮಂತ್ ಹಾಡಿಗೆ ತಾಳಹಾಕಿದರು. ಅಲ್ಲದೆ ಮಹಾರಾಜ ವಿಶ್ವನಾಥ್, ನಿಧಿ ಸುಬ್ಬಯ್ಯ, ವೈಷ್ಣವಿ, ರಘು ಜೊತೆ ಹಾಡಿಗೆ ಹೆಜ್ಜೆ ಹಾಕಿದರು. ಕೊನೆಗೆ ರಘು ಚಿತ್ತಲ್ ಪತ್ತಲು ಜೀವನವೇ ಚಿತ್ತಲ್ ಪತ್ತಲು.. ಎಂದು ಹಾಡನ್ನು ಮುಕ್ತಾಯಗೊಳಿಸುತ್ತಾರೆ.

ಬಳಿಕ ಹಾಡು ಮುಗಿದ ನಂತರ ಮನೆಯ ಸದಸ್ಯರೆಲ್ಲರೂ ಶಿಳ್ಳೆ ಹಾಡು ಚಪ್ಪಾಳೆ ಹೊಡೆಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ.

Comments

Leave a Reply

Your email address will not be published. Required fields are marked *