ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?

– ವಿನಯ್ ಕುಲಕರ್ಣಿ ಆಪ್ತ ಅಧಿಕಾರಿ ಅರೆಸ್ಟ್

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧಿ ಆಗಿರುವ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಕೇಸ್‍ಗೆ ಇವತ್ತು ಸ್ಫೋಟಕ ತಿರುವು ಸಿಗುವ ಸಾಧ್ಯತೆ ಇದೆ.

ಕೊಲೆ ಕೇಸ್‍ನಲ್ಲಿ ಪ್ರಮುಖ ಆರೋಪಿ ಆಗಿರುವ ಬಸವರಾಜ ಮುತ್ತಗಿ ಇವತ್ತು ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಮಾಹಿತಿಗಳನ್ನು ಹೊರಹಾಕುವ ಸಾಧ್ಯತೆ ಇದೆ. ನಿನ್ನೆ ಸಿಬಿಐ ಬುಲಾವ್ ಮೇಲೆ ವಿಚಾರಣೆಗೆ ಹಾಜರಾದ ಬಳಿಕ ಮಾತಾಡಿದ್ದ ಮುತ್ತಗಿ `ಒಂದು ದಿನ ಕಾಯಿರಿ. ಮಾಧ್ಯಮಗಳ ಎದುರು ಬಹಳಷ್ಟು ಚರ್ಚೆ ಮಾಡುವುದು ಇದೆ. ನಾನೂ ಕೂಡಾ ಓರ್ವ ವಕೀಲ. ಈಗಾಗಲೇ ಕೇಸ್ ವಿಚಾರಣೆ ಹಂತದಲ್ಲಿದ್ದು ಮಾಧ್ಯಮಗಳ ಮುಂದೆ ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡ್ತೇನೆ’ ಎಂದಿದ್ದಾರೆ. ಇದನ್ನೂ ಓದಿ: ಅಶೋಕ್ ಪಿಎ ವಿರುದ್ಧ ದೂರು ನೀಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಸೇವೆಯಿಂದ ವಜಾ

ನಿನ್ನೆ ಸಿಬಿಐ ದಿಢೀರ್ ದಾಳಿ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಬಂಧಿಸಿದೆ. ಅಲ್ಲದೇ ಯೋಗೇಶ್ ಗೌಡ ಪತ್ನಿ, ಸದ್ಯ ಕಾಂಗ್ರೆಸ್‍ನಲ್ಲಿರುವ ಮಲ್ಲಮ್ಮ, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಅವರನ್ನು ವಿಚಾರಣೆ ನಡೆಸಿತ್ತು.

2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು.

Comments

Leave a Reply

Your email address will not be published. Required fields are marked *