ಮೈಸೂರು: ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ. ಹಗಲಿರುಳು ಈ ಜಿಲ್ಲೆಯ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಜಿಲ್ಲೆಯ ಜನ ಗಮನಿಸಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಬದುಕಿದ್ದಾರಾ..? ಎಂಬ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಎಸ್‍ಟಿಎಸ್, ನಾನು ಬದುಕಿದ್ದಾನಾ? ಕೆ.ಆರ್. ನಗರದ ಶಾಸಕರು ಬದುಕಿದ್ದಾರಾ? ಎಂದು ಜನರ ತೀರ್ಮಾನ ಮಾಡಿ ಹೇಳಲಿ. ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ಕುರಿತು ಸಭೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಆಯಾ ಆಯಾ ಶಾಸಕರು ಸಭೆಗೆ ಬಂದು ಚರ್ಚೆ ಮಾಡಿದ್ದಾರೆ. ಆದರೆ ಕೆ.ಆರ್.ನಗರದ ಕ್ಷೇತ್ರದ ಶಾಸಕರು ಸಭೆಗೆ ಬರಲಿಲ್ಲ. ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಸಭೆಗೆ ಬರಬೇಕಿತ್ತು ಎಂದರು.

ಈಗ ಜನರೇ ತೀರ್ಮಾನ ಮಾಡಲಿ ಯಾರು ಬದುಕಿದ್ದಾರೆ ಅಂತ. ನನಗೂ ದಿನಕ್ಕೂ ವೆಂಟಿಲೇಟರ್, ಬೆಡ್ ಗಾಗಿ ಹತ್ತಾರು ಕರೆಗಳು ಬರುತ್ತವೆ. ನಾನು ಯಾರಿಗೂ ಇನ್‍ಫ್ಲೂಯೆನ್ಸ್ ಮಾಡಿಲ್ಲ. ಯಾಕೆಂದರೆ ನನ್ನ ಪ್ರಭಾವದಿಂದ ಇನ್ನೊಬ್ಬ ರೋಗಿಗೆ ತೊಂದರೆ ಆಗುತ್ತದೆ ಅಂತಾ. ಇದು ನನ್ನ ಬದ್ಧತೆ. ಇದು ನನ್ನ ಕಾರ್ಯವೈಖರಿ ಎಂದರು.

Leave a Reply