ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

ಉಡುಪಿ: ಜಿಲ್ಲೆಗೊಂದು ಗೋಶಾಲೆ ಘೋಷಣೆ ಆಗಿರುವುದು ಸಂತಸ ತಂದಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಲು ಇದು ಅನುಕೂಲ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜ್ಯ ಬಜೆಟ್ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಿದ ಬಗ್ಗೆ ಅಭಿಪ್ರಾಯ ತಿಳಿಸಿರುವ ಅವರು, ಸಿಎಂಗೆ ಧನ್ಯವಾದ, ಜಿಲ್ಲೆಗೊಂದು ಗೋಶಾಲೆ ಘೋಷಣೆ ಆಗಿರುವುದು ಸಂತಸವಾಗಿದೆ. ಇದರಿಂದ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಲು ಅನುಕೂಲವಾಗಲಿದೆ. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನೆನಪಿನಲ್ಲಿ ಸ್ಮೃತಿ ವನ ಘೋಷಣೆಯಾಗಿರುವುದು ಸಹ ಬಹಳ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಕರ್ನಾಟಕ ಭವನಕ್ಕೆ 10 ಕೋಟಿ ರೂ. ಅನುದಾನ ಮೀಸಲಿರಿಸಿರುವುದು ಉತ್ತಮ ನಿರ್ಧಾರ. ಕರ್ನಾಟಕದ ಯಾತ್ರಿಕರಿಗೆ ಭವನದಿಂದ ಬಹಳ ಉಪಯೋಗವಾಗಲಿದೆ. ಬಜೆಟ್‍ನಲ್ಲಿ ಘೋಷಣೆ ಆಗಿದ್ದೆಲ್ಲಾ ಕಾರ್ಯಗತವಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

Comments

Leave a Reply

Your email address will not be published. Required fields are marked *