ಜಿಟಿಡಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ – ಹೆಚ್.ಡಿ. ಕುಮಾರಸ್ವಾಮಿ

– ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ
– ರಾಜಕೀಯ ಜೀವನದಲ್ಲಿ ಬಹಳ ಅನುಭವ ಆಗಿದೆ

ಮೈಸೂರು: ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಜಿಟಿಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ, ಆದರೂ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ. ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ದುರಹಂಕಾರದಲ್ಲಿ ಮಾತಾಡುತ್ತಿದ್ದಾರೆ. ಅಧಿಕಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ ಎಂದು ಹೇಳಿದ್ದಾರೆ.

ಜಿ.ಟಿ. ದೇವೇಗೌಡರನ್ನು ವಾಪಸ್ ಜೆಡಿಎಸ್‍ಗೆ ಕರೆಸಿ ಕೊಳ್ಳುವ ಪ್ರಶ್ನೆ ಇಲ್ಲ. ಅವರಾಗಿಯೇ ಅವರು ನಮ್ಮಿಂದ ದೂರ ಹೋಗಿದ್ದಾರೆ. ಸಾರಾ ಮಹೇಶ್ ಕಾರಣಕ್ಕೆ ದೂರು ಹೋಗುತ್ತಿದ್ದೇನೆ ಅಂತಾ ಹೇಳಿದ್ದಾರೆ. ಸಾರಾ ಮಹೇಶ್ ಅವರಿಗೆ ಅಂತದ್ದು ಏನ್ ಮಾಡಿದ್ದಾರೋ ಗೊತ್ತಿಲ್ಲ. ಸಾರಾ ಮಹೇಶ್ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಲು ನಾನೇನೂ ಕೋಲೆ ಬಸವನಾ? ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಬರುವುದಕ್ಕೆ ಜಿಟಿಡಿ ಮತ್ತೆ ಜೆಡಿಎಸ್‍ಗೆ ಬರ್ತಿನಿ ಅಂದ್ರೂ ನಾವು ಕರೆಸಿಕೊಳ್ಳಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಜಿಟಿಡಿ ಬಗ್ಗೆ ಹೆಚ್.ಡಿ.ದೇವೇಗೌಡರಿಗೆ ಸ್ವಲ್ಪ ಸಾಫ್ಟ್ ಕಾರ್ನರ್ ಇತ್ತು. ಈಗ ಅವರಿಗೂ ಇರುವ ಸತ್ಯ ಹೇಳಿ ಕನ್ವಿನ್ಸ್ ಮಾಡುತ್ತೇನೆ. ಇಂಥವರ ಸಹವಾಸ ಬಿಡಬೇಕು. ಇಲ್ಲದೆ ಇದ್ದರೆ ಸ್ಲೋ ಪಾಯಿಸನ್ ಆಗಿ ಪಕ್ಷ ಹಾಳು ಮಾಡುತ್ತಾರೆ ಎಂದು ಹೇಳಿ ಒಪ್ಪಿಸುವೆ. ನಾನು ಈ ಪಕ್ಷದಲ್ಲಿ ಸಕ್ರಿಯಾನಾಗಿ ಕೆಲಸ ಮಾಡುವ ದಿನದವರೆಗೂ ಜಿಟಿಡಿಯನ್ನು ಜೆಡಿಎಸ್ ಗೆ ಮತ್ತೆ ಸೇರಿಸುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

ನಾನು ಯಾರನ್ನು ಪಕ್ಷದಿಂದ ಕಳುಹಿಸಿಲ್ಲ. ಅವರದ್ದೇ ಆಗಿರುವ ನಿರ್ಧಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಸಣ್ಣ ಕಾರ್ಯಕರ್ತರೆ ನಮ್ಮ ಪಕ್ಷಕ್ಕೆ ಸಾಕು. ದೊಡ್ಡದಾಗಿ ಬೆಳೆದು ನಿಂತಿರುವರು ನಮ್ಮ ಪಕ್ಷಕ್ಕೆ ಬೇಡ. ಈ ಹಿಂದೆ ಹೋದವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ಅನುಭವಿಸಿದ್ದೇವೆ ಇದೇ ಫೈನಲ್ ನಿರ್ಧಾರವಾಗಿದೆ. ನನ್ನ ಪಕ್ಷದ ಅಸ್ತಇತ್ವ ಉಳಿಸಿಕೊಳ್ಳಬೇಕು ಅಷ್ಟೇ ಎಂದಿದ್ದಾರೆ.

Comments

Leave a Reply

Your email address will not be published. Required fields are marked *