– ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ
ಬೆಂಗಳೂರು: ಜಾಲಿ ರೈಡ್ ಹೋದ ಮೂವರು ಗೆಳೆಯರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆ ಟೋಲ್‍ಗೇಟ್ ಬಳಿ ನಡೆದಿದೆ. ಮೃತರು ಮದ್ಯ ಸೇವಿಸಿ ಒಂದೇ ಬೈಕಿನಲ್ಲಿ ರೈಡ್‍ಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಲವನೀತ್, ಹರೀಶ್ ಮತ್ತು ರಾಜೇಶ್ ಮೃತ ಯುವಕರು. ಮದ್ಯದ ನಶೆಯಲ್ಲಿದ್ದ ಯುವಕರು ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಹೆಲ್ಮೆಟ್ ಹಾಕದ ಹಿನ್ನೆಲೆ ತಲೆಭಾಗಕ್ಕೆ ಗಂಭಿರವಾಗಿ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply