ಜಾಗ ನೀಡದ್ದಕ್ಕೆ ತರಗತಿಯಲ್ಲೇ ಸ್ನೇಹಿತನನ್ನು ಗುಂಡಿಕ್ಕಿ ಕೊಂದೇ ಬಿಟ್ಟ

ಲಕ್ನೋ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಕುಳಿತುಕೊಳ್ಳಲು ಜಾಗ ಕೊಡಲಿಲ್ಲವೆಂಬ ಕಾರಣಕ್ಕೆ ತನ್ನ ಸ್ನೇಹಿತನನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬುಲಂದ್‍ಶಹರ್ ಜಿಲ್ಲೆಯ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರು ತರಗತಿಯಲ್ಲಿ ಕುಳಿತುಕೊಳ್ಳುವ ಸ್ಥಳದ ವಿಷಯವಾಗಿ ಪರಸ್ಪರ ಜಗಳವಾಡಿಕೊಂಡಿದ್ದರು. ಅದೇ ಸಿಟ್ಟಿನಲ್ಲಿ ಮನೆಗೆ ತೆರಳಿದ ಒಬ್ಬ ವಿದ್ಯಾರ್ಥಿ ತನ್ನ ಚಿಕ್ಕಪ್ಪನ ಪಿಸ್ತೂಲ್ ತಂದು ತನ್ನ ಸ್ನೇಹಿತನನ್ನು ಗುಂಡಿಕ್ಕಿ ಕೊಂದಿದ್ದಾನೆ.

 

14 ವರ್ಷದ ಬಾಲಕರಿಬ್ಬರು ತರಗತಿಯಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಜಗಳವಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬ ಮನೆಗೆ ತೆರಳಿ ಸೈನ್ಯದಿಂದ ರಜೆಯ ಕಾರಣಕ್ಕಾಗಿ ಬಂದಿದ್ದ ತನ್ನ ಚಿಕ್ಕಪ್ಪನಿಗೆ ಸೇರಿದ ಪರವಾನಿಗೆ ಇದ್ದ ರಿವಾಲ್ವರ್‌ ಅನ್ನು ಕದ್ದು ತಂದು ಜಗಳವಾಡಿದ ಸ್ನೇಹಿತನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಘಟನೆಯ ಕುರಿತು ಪೊಲೀಸರು ವಿವರಿಸಿದರು.

ಶಾಲೆಯ ಎರಡನೇ ಅವಧಿ ಮುಗಿದ ಬಳಿಕ ಈ ಬಾಲಕ ಮೂರು ಬಾರಿ ಗುಂಡಿಕ್ಕಿದ್ದಾನೆ. ತಲೆ, ಎದೆ, ಹೊಟ್ಟೆಗೆ ಗುಂಡು ಬಿದ್ದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗುಂಡು ಹೊಡೆದ ತಕ್ಷಣ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯು ಮೊದಲ ಮಹಡಿಯ ತರಗತಿಯಿಂದ ನೆಲಮಹಡಿಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲರನ್ನೂ ಭಯಗೊಳಿಸಿದ್ದ. ಕೊನೆಗೆ ಶಿಕ್ಷಕರು ಆರೋಪಿಯನ್ನು ಹಿಡಿದು ಗನ್ ಕಸಿದುಕೊಂಡಿದ್ದರು.

ಘಟನಾ ಸ್ಥಳದಲ್ಲಿಯೇ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ಬ್ಯಾಗ್‍ನಲ್ಲಿದ್ದ ರಿವಾಲ್ವಾರ್ ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *