ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ, ದೇಹವನ್ನು ಬಗೆದು ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ಜರುಗಿದೆ.

ರಾಮೇಗೌಡ (65)ಮೃತ ನಾಗಿದ್ದಾನೆ. ನೆಲಮನೆ ಗ್ರಾಮದ ನಿವಾಸಿಯಾದ ರಾಮೇಗೌಡ ತನ್ನ ಜಮೀನಿನಲ್ಲಿ ಕೆಲಸ ಮಾಡಲು ಹೋದ ಸಂದರ್ಭದಲ್ಲಿ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಹೊಟ್ಟೆಯನ್ನು ಬಗೆದು ಸಾಯಿಸಿದೆ. ರಾಮೇಗೌಡರು ತುಂಬಾ ಸಮಯ ಜಮೀನಿನಿಂದ ಮನೆಗೆ ಬಾರದ ಕಾರಣ ಮನೆಯವರು ಜಮೀನಿಗೆ ತೆರಳಿ ನೋಡಿದ ಸಂದರ್ಭದಲ್ಲಿ ರಾಮೇಗೌಡ ಸಾವನ್ನಪ್ಪಿರುವ ದೃಶ್ಯ ಕಂಡಿದೆ. ಇದನ್ನೂ ಓದಿ: ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? – ಸಿದ್ದರಾಮಯ್ಯ ಟೀಕೆ

ರಾಮೇಗೌಡನನ್ನು ಸಾಯಿಸಿರುವ ಪ್ರಾಣಿಯ ಗುರುತುಗಳು ಪತ್ತೆಯಾಗದ ಕಾರಣ ಯಾವ ಪ್ರಾಣಿಯಿಂದ ರಾಮೇಗೌಡರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ರೀತಿ ನೋಡಿದರೆ ಚಿರತೆ ಅಥವಾ ಕಾಡು ಹಂದಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *