ಜನರು ಆತ್ಮವಿಶ್ವಾಸದಿಂದ ಇರಿ, ಸರ್ಕಾರ ನಿಮ್ಮ ಜೊತೆಗಿದೆ: ಸುಧಾಕರ್

– ಪಾಸಿಟಿವ್ ಬಂದ್ರೆ ಹೆರಬೇಡಿ, ಧೃತಿಗೆಡಬೇಡಿ

ಬೆಂಗಳೂರು: ಜನರು ಆತ್ಮವಿಶ್ವಾಸದಿಂದ ಇರಿ ಸರ್ಕಾರ ನಿಮ್ಮ ಜೊತೆಗೆ ಇದೆ. ಮುಖ್ಯಮಂತ್ರಿಯಿಂದ ಕಟ್ಟಕಡೆಯ ಅಧಿಕಾರಿಗಳು ನಿಮ್ಮ ಜೊತೆಗೆ ಇರುತ್ತೇವೆ. ನಿಮ್ಮ ಆರೋಗ್ಯ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಭರವಸೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 247*7 ಕಾಲ್ ಸೆಂಟರ್ ತೆರೆಯಲಾಗಿದೆ. ಹೋರಾಟ ಮಧ್ಯೆ ಇದ್ದೇವೆ ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಟ ನಡೆಸಬೇಕಿದೆ. ಎಲ್ಲರ ಜೊತೆಗೆ ಸಭೆ ನಡೆಸುತ್ತೇನೆ. 2000 ಐಸಿಯು ಮಾಡಿಲರ್ ಐಸಿಯು ಬೆಂಗಳೂರಿನ 8 ವಲಯದಲ್ಲಿ ಕಾರ್ಯರಂಭವಾಗಲಿದ್ದು, ಆಕ್ಸಿಜನ್ ಕೊಡುವ ತಂತ್ರಜ್ಞಾನ ಒಂದು ವಾರದಲ್ಲಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲೂ ಆಕ್ಸಿಜನ್ ಕೊರತೆಯಾಗಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸಬೇಕು. ಅಂಬುಲೆನ್ಸ್ ವಸೂಲಿ ವಿಚಾರ ಸರ್ಕಾರದಿಂದ ದರ ನಿಗದಿಯಾಗಲಿದೆ. ಸುಲುಗೆಕೋರರ ವಿರುದ್ಧ ಕ್ರಮ 108 ಅಂಬುಲೆನ್ಸ್ ಬಳಕೆ ಮಾಡಿಕೊಳ್ಳಲು ಮನವಿ ಮಾಡಿಕೊಂಡ ಸಚಿವರು, ಖಾಸಗಿ ಅಂಬುಲೆನ್ಸ್ ಗಳಿಗೂ ದರ ನಿಗದಿ ಮಾಡುವ ನಿರ್ಧಾರ ಮಾಡುವುದಾಗಿ ತಿಳಿಸಿದರು.

ರೋಗದ ಲಕ್ಷಣಗಳು ಕಂಡ ಕೂಡಲೇ ಟೆಸ್ಟ್ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ. ನಮ್ಮ ಲಸಿಕೆ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲರನ್ನ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಕೊರೊನಾ ಪಾಸಿಟಿವ್ ಬಂದ್ರೆ ಹೆದರಬೇಡಿ, ಧೃತಿಗೆಡಬೇಡಿ ಧೈರ್ಯದಿಂದ ಇರಿ. ಮಾಜಿ ಸಚಿವ ಎಂಬಿ ಪಾಟೀಲ್ ಆಸ್ಪತ್ರೆಯಲ್ಲಿ ಉತ್ತಮ ಕೆಲಸ ನಡೆಯುತ್ತಿದೆ, ಸರ್ಕಾರಕ್ಕೆ ಜನರಿಗೆ ಸ್ಪಂದಿಸಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಇದೇ ವೇಳೆ ಸಚಿವರು ಶ್ಲಾಘಿಸಿದರು.

Comments

Leave a Reply

Your email address will not be published. Required fields are marked *