ಜಗ್ಗೇಶ್, ದರ್ಶನ್ ಇಬ್ಬರನ್ನೂ ಕೂರಿಸಿ ಮಾತನಾಡುತ್ತೇನೆ – ಸಂದೇಶ್ ನಾಗರಾಜ್

ಮೈಸೂರು: ನಟರಾದ ಜಗ್ಗೇಶ್ ಮತ್ತು ದರ್ಶನ್ ಇಬ್ಬರನ್ನು ಇಬ್ಬರನ್ನು ಮುಂದೆ ಕೂರಿಸಿ ಮಾತನಾಡುತ್ತೇನೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.

ಸ್ಯಾಂಡಲ್‍ವುಡ್ ನಟ ನವರಸ ನಾಯಕ ಜಗ್ಗೇಶ್ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ತಿಕ್ಕಾಟದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದರ್ಶನ್ ಹಾಗೂ ಜಗ್ಗೇಶ್ ಅಣ್ಣ ತಮ್ಮಂದಿರಂತೆ ಇರಬೇಕು. ಜಗ್ಗೇಶ್ ಅವರಲ್ಲಿ ನಾನು ವಿನಂತಿ ಮಾಡುತ್ತಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ. ಒಳ್ಳೆಯ ರೀತಿಯಲ್ಲಿ ಇಬ್ಬರನ್ನು ಮುಂದೆ ಕೂರಿಸಿ ಮಾತನಾಡುತ್ತೇನೆ ಎಂದರು.

ಆರ್‍ಎಸ್‍ಎಸ್ ಒಂದು ದೊಡ್ಡ ಸಂಸ್ಥೆ. ಅದನ್ನು ಚಿತ್ರೀಕರಣದ ಮಧ್ಯೆ ತರಬಾರದು. ಜಗ್ಗೇಶ್ ದರ್ಶನ್ ಬಗ್ಗೆ ಈ ರೀತಿ ಮಾತನಾಡಬಾರದು. ಜಗ್ಗೇಶ್ ಒಮ್ಮೊಮ್ಮೆ ಒಂದೊಂದು ತರಹ ಹೇಳಿಕೆ ನೀಡುವುದು ತಪ್ಪು. ದರ್ಶನ್ ಇನ್ನೂ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದರ್ಶನ್‍ಗೆ ಈ ವಿಚಾರವೇ ಗೊತ್ತಿಲ್ಲ ಎಂದು ಹೇಳಿದರು.

ಸಿನಿಮಾಕ್ಕೆ ಯಾವುದೇ ಜಾತಿ ತರಬಾರದು. ನಾನು ಕೂಡ ಒಬ್ಬ ಸೀನಿಯರ್ ಆಗಿದ್ದೇನೆ. ಎಲ್ಲರೂ ಒಂದು ಜಾತಿಗೆ ಸಿನಿಮಾ ತೆಗೆಯುವುದಿಲ್ಲ. ಸಿನಿಮಾಗೆ ಯಾವುದೇ ಜಾತಿ ಇರುವುದಿಲ್ಲ ಎಂದರು.

Comments

Leave a Reply

Your email address will not be published. Required fields are marked *