ಛೋಟಾ ಡಿಟೆಕ್ಟಿವ್‍ಗೆ 2 ವರ್ಷದ ಸಂಭ್ರಮ- ವೈರಲ್ ಆಯ್ತು ಶೆಟ್ರ ವೀಡಿಯೋ

ಬೆಂಗಳೂರು: ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್‍ನಿಗೆ 2 ವರ್ಷ ತುಂಬಿರುವ ಸಂತೋಷವನ್ನು ರಿಷಬ್ ಶೆಟ್ಟಿ ಟ್ವಿಟ್ಟರ್‌ನಲ್ಲಿ ಒಂದು ವೀಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕವಾಗಿ ಸಂಭ್ರಮಿಸಿದ್ದಾರೆ.

ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ‘ದೊಡ್ಡವರ ಮಕ್ಕಳಾಟ’. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು, ಪ್ರಗತಿ ಆಡಿದ ಮಕ್ಕಳಾಟವನ್ನ ನಿಮ್ಮೊಡನೆ ಹಂಚಿಕೊಳ್ತಿದ್ದೇವೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ. Happy Birthday Ranvit ಎಂದು ಬರೆದುಕೊಂಡು ವೀಡೀಯೋವನ್ನು ಟ್ವಿಟ್ಟರ್‌ನಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ.

ರಿಷಬ್ ಮಗನ ರಾಯಲ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಪುಟ್ಟ ಡಿಟೆಕ್ಟಿವ್, ಬೆಲ್ ಬಾಟಮ್ ಸ್ಟಾರ್, ಛೋಟಾ ಶೆಟ್ರೆ, ಮುದ್ದಾದ ಹೀರೋ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಮಗನ ವೀಡಿಯೋವನ್ನು ಶೇರ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವೀಡಿಯೋದಲ್ಲಿ ಏನಿದೆ:
ರಿಷಬ್ ಶೆಟ್ಟಿ ಮಗ ರಣ್ವಿತ್‍ಗೆ 2 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದೆ. ಅಪ್ಪನ ಸಿನಿಮಾದ ಮ್ಯೂಸಿಕ್‍ಗೆ ಹೆಜ್ಜೆ ಹಾಕುತ್ತಾ ಪುಟ್ಟದಾದ ಕಾರ್ ಡ್ರೈವ್ ಮಾಡಿಕೊಂಡು ಮಾಸ್ ಹೀರೊನಂತೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಎಂಟ್ರಿಕೊಟ್ಟಿರುವ ವೀಡಿಯೋ ಸಖತ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *