ಛಬ್ಬಿಯಲ್ಲಿ ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

ಹುಬ್ಬಳ್ಳಿ: ಹುಬ್ಬಳ್ಳಿ ಛಬ್ಬಿ ಗ್ರಾಮದಲ್ಲಿ ಬೆಳಗ್ಗಿನಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಗ್ರಾಮದ ಬೀದಿ ಸುತ್ತಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಷ್ಕರಣೆ ಮಾರ್ಗ ತೋರಿದ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು.

ನಿನ್ನೆ ಮಧ್ಯಾಹ್ನ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದ ಸಚಿವರಿಗೆ ತುಸು ಖಾರ ಎನಿಸಿತು. ರಾತ್ರಿ ಲಘು ಆಹಾರವಾಗಿ ಮೊಸರನ್ನ ಸೇವಿಸಿದರು.

ಸರ್ಕಾರ ಶಾಲೆಯ ಕೊಠಡಿಯಲ್ಲಿ ಸಚಿವರಿಗಾಗಿ ಕೊಠಡಿಯಲ್ಲಿ ಚಾಪೆ, ದಿಂಬು, ಏರ್ ಕೂಲರ್, ಪ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಿಹರಿಸಿದ ಸಚಿವರು ದಾರಿಯಲ್ಲಿ ಸಿಕ್ಕವರ ಅಹವಾಲುಗಳನ್ನು ಸ್ವೀಕರಿದರು. ನಂತರ ಕೊಠಡಿಯಲ್ಲಿ ವಸ್ತ್ರ ಬದಲಿಸಿ ದಿನದ ಗ್ರಾಮ ವಾಸ್ತವ್ಯದ ಸಾರ್ಥಕ ಭಾವದೊಂದಿಗೆ ನಿದ್ರೆಗೆ ಜಾರಿದರು.

ಸಚಿವರೊಂದಿಗೆ ಕಂದಾಯ ಇಲಾಖೆಯ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರ್‍ಗಳು ಪಕ್ಕದ ಕೊಠಡಿಯಲ್ಲಿ ಮಲಗಿದರು.

Comments

Leave a Reply

Your email address will not be published. Required fields are marked *