ಚಿರು ಅದ್ಭುತ ಸಹನಟ- ರಮ್ಯಾ ಸಂತಾಪ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರು ಇಂದು ಹೃದಯಾಘತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿಯಿಂದ ಇಡೀ ಚಂದನವನಕ್ಕೆ ಸಿಡಿಲು ಬಡಿದಂತೆ ಆಗಿದೆ. 25ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಮುಂದೆ ಒಳ್ಳೆಯ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದ ಚಿರು ಸಾವಿಗೆ ಹಲವಾರು ನಟರು ಸಂತಾಪ ಸೂಚಿಸಿದ್ದಾರೆ.

ಚಿರಂಜೀವಿ ಸರ್ಜಾ ಅವರೊಂದಿಗಿನ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ರಮ್ಯಾ, “ಚಿರು ಅದ್ಭುತ ಸಹನಟ. ಯಾವಾಗಲೂ ಹರ್ಷಚಿತ್ತದಿಂದ ಇರುತ್ತಿದ್ದ ಅವರು ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನು ಆಹ್ಲಾದಕರ ಮತ್ತು ಸ್ಮರಣೀಯ ಅನುಭವವನ್ನಾಗಿಸಿದ್ದರು. ಇಂತಹ ಕ್ಷಣದಲ್ಲಿ ಅವರ ಪ್ರೀತಿಪಾತ್ರರು, ಕುಟುಂಬಸ್ಥರನ್ನು ಸಮಾಧಾನಪಡಿಸುವ ಪದಗಳು ಆಡುವುದು ತುಂಬಾ ಕಷ್ಟ. ಅವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ. ಅವರ ಆತ್ಮಕೆ ಶಾಂತಿ ಸಿಗಲಿ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.

https://www.facebook.com/178427215195/posts/10158042562045196/

ಚಿರಂಜೀವಿ ಸರ್ಜಾ ಅವರು ರಮ್ಯಾ ಅವರೊಂದಿಗೆ ‘ದಂಡಂ ದಶಗುಣಂ’ ನಟಿಸಿದ್ದರು. 2011ರ ಏಪ್ರಿಲ್‍ನಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಚಿರು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು.

ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರೆಳಿದ್ದಾರೆ.

Comments

Leave a Reply

Your email address will not be published. Required fields are marked *