ಚಿರುನಾ ಕಷ್ಟಪಟ್ಟು ಪಡೆದಿದ್ದೆ- ಅಳುತ್ತಿರೋ ಅತ್ತಿಗೆಗೆ ನೀರು ಕುಡಿಸಿ ಧ್ರುವ ಸಮಾಧಾನ

ಬೆಂಗಳೂರು: ಚಿರುನಾ ಕಷ್ಟಪಟ್ಟು ಪಡೆದಿದ್ದೆ ಎಂದು ನಟಿ ಮೇಘನಾ ರಾಜ್ ಪತಿಯ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಮೇಘನಾ ರಾಜ್ ಇಂದು ಮುಂಜಾನೆ ಕೂಡ ಪತಿಯ ಪಾರ್ಥಿವ ಶರೀರದ ಎದುರು ಕೆಲಹೊತ್ತು ಕುಳಿತಿದ್ದರು. ಆಗ ಪತಿಯನ್ನೇ ನೋಡುತ್ತಾ ಮೌನವಾಗಿ ಕುಳಿತಿದ್ದರು. ಇದೀಗ ಪತಿಯ ಪಾರ್ಥಿವ ಶರೀರದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆಗ ಅತ್ತಿಗೆಯನ್ನು ಸಮಾಧಾನ ಮಾಡಲು ನಟ ಧ್ರುವ ಸರ್ಜಾ ಮುಂದಾಗಿದ್ದಾರೆ.

ಈ ವೇಳೆ ಚಿರುನಾ ನಾನು ಕಷ್ಟಪಟ್ಟು ಪಡೆದಿದ್ದೆ. ಆದರೆ ಇಷ್ಟು ಬೇಗ ನನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಆಗ ಧ್ರುವ ಸಮಾಧಾನ ಮಾಡಿ ನೀರು ಕುಡಿಸಿ ಧೈರ್ಯ ತುಂಬಿದ್ದಾರೆ.

ಚಿರಂಜೀವಿ ಮತ್ತು ಮೇಘನಾ ಪರಸ್ಪರ 10 ವರ್ಷದಿಂದ ಪ್ರೀತಿಸಿ ಮನೆಯವರನ್ನು ಒಪ್ಪಿಸಿ 2018 ರಲ್ಲಿ ಮದುವೆಯಾಗಿದ್ದರು. ಈ ಜೋಡಿ ಸದಾ ಸ್ನೇಹಿತರಂತೆ ಇದ್ದರು. ಇದೀಗ ಚಿರಂಜೀವಿ ಅಗಲಿಕೆಯಿಂದ   ಸರ್ಜಾ ಕುಟುಂಬವೇ ಆಘಾತಕ್ಕೆ ಒಳಗಾಗಿದೆ.

‘ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಕೂಡ ಕಣ್ಣೀರು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆ ಬಳಿಯಿ ನೆಲಗೂಳಿ ಗ್ರಾಮದಲ್ಲಿ ತಮ್ಮ ಧ್ರುವ ಸರ್ಜಾರ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಈಗಾಗಲೇ ಫಾರ್ಮ್ ಹೌಸ್‍ನಲ್ಲಿ ಅಂತಿಯ ಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *