ಚಿನ್ನದಂತ ಮಾತು ಹೇಳಿ ಚಿನ್ನಾಭರಣ ದೋಚಿದ್ರು

ಹುಬ್ಬಳ್ಳಿ/ಧಾರವಾಡ: ಚಿನ್ನದ ಒಡೆವೆಗಳನ್ನು ತೊಳೆದುಕೊಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕಳ್ಳರು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯ ಸರ್ಕಾರಿ ಶಾಲೆಯ ಹಿಂಬಾಗದಲ್ಲಿ ನಡೆದಿದೆ.

ವಿಷ್ಣುಸಾ ಪವಾರ ಎಂಬವರ ಮನೆಯಲ್ಲಿ ಸರೋಜಾ ಹಾಗೂ ಸೊಸೆ ಅನಿತಾ ಮೋಸಕ್ಕೆ ಒಳಗಾಗಿದ್ದು, ಆರು ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ. ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಅತ್ತೆಯನ್ನು ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ ಒಳಗಡೆ ಕಳಿಸಿದ್ದಾರೆ. ಇದೇ ವೇಳೆ ತಮ್ಮ ಕೈ ಚಳಕ ತೋರಿಸಲು ಕಳ್ಳರು ಮುಂದಾಗಿದ್ದಾರೆ.

190 ಗ್ರಾಂ ಬಂಗಾರ ದೋಚುವುದು ಗೊತ್ತಾದ ತಕ್ಷಣವೇ ಮಹಿಳೆ ಬಾಗಿಲು ಹಾಕಲು ಪ್ರಯತ್ನಪಟ್ಟಿದ್ದಾರೆ. ಆದರೆ ವಂಚಕರಿಬ್ಬರು ಪರಾರಿಯಾಗಿದ್ದಾರೆ. ವಂಚಕರ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆ ಇನ್‍ಸ್ಪೆಕ್ಟರ್ ಶಿವಾನಂದ್ ಕಮತಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ವಿವಿಧೆಡೆ ನಾಕಾಬಂದಿ ಹಾಕಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *