ಚಿತಾಗಾರಗಳ ಮುಂದೆ ಅಂಬುಲೆನ್ಸ್‌ಗಳು ಕ್ಯೂ

ಬೆಂಗಳೂರು: ದಿನೇ ದಿನೇ ಕೊರೊನಾ ಮತ್ತು ನಾನ್ ಕೋವಿಡ್ ವ್ಯಕ್ತಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತಾಗಾರಗಳ ಮುಂದೆ ಸಾಲು ಸಾಲಾಗಿ ಅಂಬುಲೆನ್ಸ್‌ಗಳು ಕ್ಯೂ ನಿಂತಿವೆ.

ಚಾಮರಾಜಪೇಟೆ, ಬನಶಂಕರಿ ಮತ್ತು ಹೆಬ್ಬಾಳ ವಿದ್ಯುತ್ ಚಿತಾಗಾರದ ಮುಂದೆ ಅಂಬುಲೆನ್ಸ್ ಮತ್ತು ಜನರು ಸಾಲಾಗಿ ಕ್ಯೂ ನಿಂತಿದ್ದಾರೆ. ಕೋವಿಡ್ ಮತ್ತು ನಾನ್ ಕೋವಿಡ್ ವ್ಯಕ್ತಿಗಳ ಸಾವಿನ ಸಂಖ್ಯೆ ಜಾಸ್ತಿ ಆಗುತ್ತಿದೆ. ಇತ್ತ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ಸಮಯ ಬೇಕಾಗುತ್ತೆ. ಹೀಗಾಗಿ ಮೃತ ದೇಹವನ್ನು ಸಂಬಂಧಿಕರು ಅಂಬುಲೆನ್ಸ್‌ನಲ್ಲಿ ತಂದು ವಿದ್ಯುತ್ ಚಿತಾಗಾರದ ಮುಂದೆ ನಿಲ್ಲಿಸಲಾಗಿದೆ.

ಇತ್ತ ಚಿತಾಗಾರದಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ. ಹೀಗಾಗಿ ಅಂತ್ಯಕ್ರಿಯೆ ಮಾಡಲು ತಡವಾಗುತ್ತಿದೆ. ಆದ್ದರಿಂದ ಸಂಬಂಧಿಕರು ಚಿತಾಗಾರದ ಮುಂದೆ, ರಸ್ತೆ ಪಕ್ಕದಲ್ಲಿಯೇ ಮೃತದೇಹವನ್ನು ಇಟ್ಟುಕೊಂಡು ಅಂತ್ಯಕ್ರಿಯೆಗಾಗಿ ಕಾಯುತ್ತಿದ್ದಾರೆ. ಹೆಬ್ಬಾಳ ಚಿತಾಗಾರದಲ್ಲಿ ಕೊರೊನಾ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸರತಿ ಸಾಲಿನಲ್ಲಿ ಕಾಯಲಾಗುತ್ತಿದೆ. ಪಿಪಿಇ ಕಿಟ್ ಧರಿಸಿ ಸಿಬ್ಬಂದಿ ಕುಟುಂಬಸ್ಥರು ಕಾಯುತ್ತಿದ್ದಾರೆ.

ಈಗಾಗಲೇ ಬಿಬಿಎಂಪಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಮಾಡಲು ಪ್ರತ್ಯೇಕ ವಿದ್ಯುತ್ ಚಿತಾಗಾರ ಮಾಡಲು ಸಿದ್ಧತೆ ನಡೆಸುತ್ತಿದೆ. ಜೊತೆಗೆ ಚಿತಾಗಾರದಲ್ಲಿ ಸಿಬ್ಬಂದಿ ಹೆಚ್ಚಿಸುವ ಸಾಧ್ಯತೆ ಕೂಡ ಇದೆ.

Comments

Leave a Reply

Your email address will not be published. Required fields are marked *