ಚಾಮರಾಜನಗರ ಬೆನ್ನಲ್ಲೇ ಮಂಡ್ಯದಲ್ಲೂ ಆಕ್ಸಿಜನ್ ಸಿಗದೆ ನರಳಾಡಿ ಸೋಂಕಿತ ಸಾವು

ಮಂಡ್ಯ: ಚಾಮರಾಜನಗರದಲ್ಲಿ ಇಂದು ಆಕ್ಸಿಜನ್ ಸಿಗದೆ 24 ಮಂದಿ ಮೃತಪಟ್ಟ ಬೆನ್ನಲ್ಲೇ ಇದೀಗ ಮಂಡ್ಯದಲ್ಲೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮಂಡ್ಯದ ಹಾಲಹಳ್ಳಿಯ ನಿವಾಸಿ ಧನಂಜಯ್(45) ಮೃತ ದುರ್ದೈವಿ. ಇವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಧನಂಜಯ್ ಅವರಿಗೆ ಇತ್ತೀಚೆಗಷ್ಟೇ ಕೊವಿಡ್ 19 ಧೃಡಪಟ್ಟಿತ್ತು. ಹೀಗಾಗಿ ವೈದ್ಯರ ಸೂಚನೆಯಂತೆ ಹೋಮ್ ಕ್ವಾರಂಟೈನ್‍ನಲ್ಲಿದ್ದರು. ಕಳೆದ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತು.

ಮಿಮ್ಸ್‍ನಲ್ಲಿ ಬೆಡ್ ಸಿಗದ ಕಾರಣ ಧನಂಜಯ್ ಅವರು ಕೀಲಾರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮತ್ತೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸರಿಯಾದ ಸಮಯಕ್ಕೆ ಧನಂಜಯ್ ಅವರಿಗೆ ಆಕ್ಸಿಜನ್ ಹಾಗೂ ಬೆಡ್ ಸಿಗದೆ ನರಳಿ ಸಾವನ್ನಪ್ಪಿದ್ದಾರೆ.

ಧನಂಜಯ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Comments

Leave a Reply

Your email address will not be published. Required fields are marked *