ಚಾಮರಾಜನಗರ ಆಮ್ಲಜನಕ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣನಾ?

ಮೈಸೂರು/ಚಾಮರಾಜನಗರ: ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡದಂತೆ ಅಂದಿನ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೌಖಿಕ ಆದೇಶ ನೀಡಿದ್ದರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಉಪ ಔಷಧ ನಿಯಂತ್ರಕ (ಡಿಡಿಸಿ) ಜೊತೆ ರೋಹಿಣಿ ಸಿಂಧೂರಿ ಮಾತನಾಡಿರುವ ಆಡಿಯೋ ಕ್ಲಿಪ್ ಲೀಕ್ ಆಗಿದೆ.

ಆಡಿಯೋ ಕ್ಲಿಪ್‍ನಲ್ಲಿ ಏನಿದೆ?:
ನಾಳೆ ಆಕ್ಸಿಜನ್ ರೀಫಿಲ್ಲಿಂಗ್ ಇಲ್ಲ ಅಂತ ಹೇಳುತ್ತಿದ್ದಾರೆ. ನನಗೆ ಮೈಸೂರಿನ 10 ಸಾವಿರ ಲೀಟರ್ ಆಕ್ಸಿಜನ್ ಫಿಲ್ ಆಗಬೇಕು. ಚಾಮರಾಜನಗರಕ್ಕೆ ಯಾಕಿಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ರೋಹಿಣಿ ಸಿಂಧೂರಿ ಪ್ರಶ್ನೆ ಮಾಡುತ್ತಾರೆ. ಆಗ ಡಿಡಿಸಿ ಅರುಣ್, ಕೇವಲ ಸರ್ಕಾರಿ ಆಸ್ಪತ್ರೆಗೆ ನೀಡಲಾಗುತ್ತಿದೆ. ಪ್ರತಿ ಆಸ್ಪತ್ರೆಯ ಜೊತೆ ಮಾತನಾಡಿ ಮುಂದಿನ ಎರಡು ದಿನಕ್ಕೆ ಎಷ್ಟು ಆಕ್ಸಿಜನ್ ಬೇಕು? ಅನ್ನೋದರ ಮಾಹಿತಿ ತೆಗೆದುಕೊಂಡು ಕಚೇರಿಗೆ ಬರುವಂತೆ ಆದೇಶ ನೀಡಿದ್ದಾರೆ.

ಈ ಮೌಖಿಕ ನಿರ್ದೇಶನದ ಹಿನ್ನೆಲೆಯಲ್ಲಿಯೇ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಆಗಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ದುರಂತ ನಡೆದಾಗಲೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಆಗಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

ಅಂದು ಸಮರ್ಥನೆ, ಇಂದು ಆರೋಪ:
ಅಂದು ದುರಂತ ಸಂಭವಿಸಿದಾಗ ರೋಹಿಣಿ ಸಿಂಧೂರಿ ಅವರನ್ನ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದರು. ಇದೀಗ ಪರೋಕ್ಷವಾಗಿಯೇ ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಅವರ ಮೌಖಿಕ ನಿರ್ದೇಶನ ಅಂತ ಹೇಳಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಗಳು ಯಾಕೆ ಹೋಗಲಿಲ್ಲಾ ಎಂಬುದು ಗೊತ್ತಿದೆ ಈಗ ಪ್ರಾಥಮಿಕ ವರದಿ ಬಂದಿದೆ. ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದ್ದು ಪೂರ್ಣ ತನಿಖೆಯ ನಂತರ ಸತ್ಯಾಸತ್ಯೆತೆ ಏನೆಂಬುದು ಗೊತ್ತಾಗಲಿದೆ. ಈಗ ತಾಂತ್ರಿಕ ಸಾಕ್ಷಿಗಳು ಸಿಗದೆ ಹೋದರೂ ಒಳಗೆ ಏನೇನು ನಡೆದಿದೆ ಎಂಬುದು ಗೊತ್ತಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

ಆಕ್ಸಿಜನ್ ಏಜೆನ್ಸಿಗೆ ಸೂಚನೆ ನೀಡಿದ್ರಾ?:
ಮೈಸೂರಿನ ಪದಕಿ ಆಕ್ಸಿಜನ್ ಏಜೆನ್ಸಿಗೆ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದಂತೆ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದರು ಎನ್ನಲಾಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಖಾಲಿ ಆದ ಹಿನ್ನೆಲೆಯಲ್ಲಿ ಡಿಡಿಸಿ ಅರುಣ್ ದೂರವಾಣಿ ಕರೆ ಮಾಡಿದ್ದರು. ಆದರೆ ಡಿಸಿ ಆದೇಶವಾಗಿದ್ದು, ಆಕ್ಸಿಜನ್ ಪೂರೈಕೆಗೆ ಏಜೆನ್ಸಿ ಹಿಂದೇಟು ಹಾಕಿತ್ತು ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

Comments

Leave a Reply

Your email address will not be published. Required fields are marked *