ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಮಹಿಳಾ ಕಾನ್ಸ್‌ಟೇಬಲ್ – ವೀಡಿಯೋ ವೈರಲ್

ಲಕ್ನೋ: ಚಲಿಸುತ್ತಿದ್ದ ರೈಲಿನ ಕೆಳಗೆ ಸಿಲುಕಿಕೊಳ್ಳುತ್ತಿದ್ದ ಮಹಿಳೆಯನ್ನು, ಮಹಿಳಾ ಕಾನ್ಸ್‌ಟೇಬಲ್ ರಕ್ಷಿಸಿರುವ ಘಟನೆ ಲಕ್ನೋ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಹಿಳಾ ಕಾನ್ಸ್‌ಟೇಬಲ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಫೆಬ್ರವರಿ 23ರಂದು ರೈಲ್ವೆ ಸಚಿವಾಲಯವು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿನೀತ ಕುಮಾರಿ ಎಂಬ ಮಹಿಳಾ ಕಾನ್ಸ್‌ಟೇಬಲ್ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಮತ್ತೊಮ್ಮೆ ಇಂತಹ ಸಾಹಸಗಳಿಗೆ ಕೈ ಹಾಕದಂತೆ ಮಹಿಳೆಗೆ ಮನವಿ ಮಾಡಿದ್ದಾರೆ.

ವೀಡಿಯೋದಲ್ಲಿ ಮಹಿಳೆಯ ಸ್ನೇಹಿತನೊಂದಿಗೆ ಬರುತ್ತಾಳೆ. ಈ ವೇಳೆ ಆಕೆಯ ಸ್ನೇಹಿತ ಚಲಿಸುತ್ತಿದ್ದ ರೈಲನ್ನು ಸುಲಭವಾಗಿ ಏರುತ್ತಾನೆ. ಆತನ ಹಿಂದೆ ಮಹಿಳೆ ಕೂಡ ರೈಲನ್ನು ಏರಲು ಪ್ರಯತ್ನಿಸಿ ಕಾಲು ಜಾರಿ ಕೆಳಗೆ ಬೀಳುತ್ತಾರೆ. ರೈಲು ಮತ್ತು ಫ್ಲಾಟ್‍ಫಾರ್ಮ್ ಮಧ್ಯೆ ಮಹಿಳೆ ಸಿಲುಕಿಕೊಳ್ಳುತ್ತಿದಂತೆಯೇ ಕರ್ತವ್ಯದಲ್ಲಿದ್ದ ವಿನೀತ ಕುಮಾರಿ ಕೂಡಲೇ ಓಡಿ ಬಂದ ಮಹಿಳೆಯನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 49.7 ಸಾವಿರ ವ್ಯೂವ್ಸ್ ಪಡೆದಿದ್ದು, 2.8 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಕಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

Comments

Leave a Reply

Your email address will not be published. Required fields are marked *