– ಬಲವಂತ ಮದುವೆ ವೀಡಿಯೋ ವೈರಲ್
– ಮದುವೆಯಲ್ಲಿ ಯುವಕನ ಕಣ್ಣೀರು
ಪಾಟ್ನಾ: ಗ್ರಾಮಸ್ಥರು ಮತ್ತು ಕುಟುಂಬಸ್ಥರೇ ಬಲವಂತವಾಗಿ ವಿಧವೆ ಅತ್ತಿಗೆ ಜೊತೆ ಮೈದುನನ ಮದುವೆ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಿಹಾರದ ದರ್ಬಾಂಗ್ ಜಿಲ್ಲೆಯ ಮೋರಾ ಕ್ಷೇತ್ರದ ಖರಪುರ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಕೆಲ ದಿನಗಳ ಹಿಂದೆಯೇ ಮಹಿಳೆಯ ಪತಿ ನಿಧನರಾಗಿದ್ದರು. ಅಣ್ಣನ ಸಾವಿನ ಬಳಿಕ ಯುವಕ ಅತ್ತಿಗೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವರು ಮಹಿಳೆ ಮತ್ತು ಯುವಕನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗಿದೆ.

ಅನೈತಿಕ ಸಂಬಂಧದ ಆರೋಪಗಳು ಕೇಳಿ ಬಂದ ಹಿನ್ನೆಲೆ ಮಹಿಳೆಯ ಪೋಷಕರು ಆಕೆಯನ್ನ ತವರಿಗೆ ಕರೆದುಕೊಂಡು ಹೋಗಿದ್ದರು. ಮಹಿಳೆಯ ಕುಟುಂಬಸ್ಥರು ಯುವಕನಿಗೆ ಕರೆ ಮಾಡಿ ಗ್ರಾಮದ ಬಳಿಯ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ಯುವಕನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವೈರಲ್ ಆಗಿರೋ ವೀಡಿಯೋದಲ್ಲಿ ಕಣ್ಣೀರು ಹಾಕೋದನ್ನ ಗಮನಿಸಬಗಹುದು. ವೀಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply